ಶಿರಸಿ: ತಾಲೂಕಿನ ಕೋಡ್ನಗದ್ದೆಯ ಗ್ರಾಮ ಪಂಚಾಯ್ತಿಯ ಸಭಾಂಗಣದಲ್ಲಿ ಕಾರವಾರದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪ್ರಾಯಯೋಜಕತ್ವದಲ್ಲಿ ಸ್ಥಳೀಯ ಶಬರ ಸಂಸ್ಥೆಯ ಸಹಕಾರದಲ್ಲಿ ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರದರ್ಶನ ಗಮನ ಸೆಳೆಯಿತು.
ಹಿರಿಯ ಕಲಾವಿದ ಗಣಪತಿ ಭಟ್ಟ ಮುದ್ದಿನಪಾಲು ಜಾಂಬವಂತನಾಗಿ, ಪ್ರವೀಣ ತಟ್ಟಿಸರ ಕೃಷ್ಣನಾಗಿ, ಕೃಷ್ಣ ಪೂಜಾರಿ ಬಲರಾಮನಾಗಿ, ಸದನಾಂದ ಪಟಗಾರ ನಾರದನಾಗಿ ಮೆಚ್ಚುಗೆ ಗಳಿಸಿದರು.
ಹಿಮ್ಮೇಳದಲ್ಲಿ ಖ್ಯಾತ ಭಾಗವತ ಗಜಾನನ ಭಟ್ಟ ತುಳಗೇರಿ, ಮದ್ದಲೆಯಲ್ಲಿ ನಾರಾಯಣ ಪೂಜಾರಿ, ಚಂಡೆಯಲ್ಲಿ ವಿಘ್ನೇಶ್ವರ ಗೌಡ ಕೆಸರಕೊಪ್ಪ ಸಹಕಾರ ನೀಡಿದರು.
ಸಭಾ ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷೆ ಮಾದೇವಿ ರಾಮಯ್ಯ ಪೂಜಾರಿ ಅಧ್ಯಕ್ಷತೆವಹಿಸಿದ್ದರು. ಕೆಡಿಪಿ ಸದಸ್ಯ ಪ್ರವೀಣ ಹೆಗಡೆ ಮಣ್ಮನೆ, ತಾ.ಪಂ. ಸದಸ್ಯೆ ಯಶೋದಾ ಗೌಡ, ಪ್ರಮುಖರಾದ ಎಸ್.ಎನ್.ಭಟ್ಟ, ಉದ್ಯಮಿ ಕೆ.ಎಸ್.ಶೆಟ್ಟಿ ಕುಂದಾಪುರ ಪಾಲ್ಗೊಂಡಿದ್ದರು.

RELATED ARTICLES  ಹಿರೇಗುತ್ತಿ ವ್ಯವಸಾಯ ಸೇವಾ ಸಹಕಾರಿ ಸಂಘದ ಧ್ವಜಾರೋಹಣ