ಭಟ್ಕಳ: ಯಾವುದೇ ಪರವಾನಿಗೆ ಇಲ್ಲದೇ ಹಿಂಸಾತ್ಮಕವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ವಾಹನವನ್ನು ಸ್ಥಳೀಯರು ಪತ್ತೆಹಚ್ಚಿ ಪೊಲೀಸರಿಗೆ ಒಪ್ಪಿಸಿದ ಘಟನೆ ಭಟ್ಕಳದ ಮುರ್ಡೇಶ್ವರ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರದಂದು ಬೆಳಗಿನ ಜಾವ ನಡೆದಿದೆ.
ಭಟ್ಕಳದಿಂದ ಮುರ್ಡೇಶ್ವರದ ಕಡೆಗೆ ಬಂದ ಮಹಿಂದ್ರಾ ಬ್ಯೂಲೆರೊ ವಾಹನವೊಂದರಲ್ಲಿ ಮುರ್ಡೇಶ್ವರದ ಸ್ಥಳೀಯ ಜಾನುವಾರುಗಳನ್ನು ತುಂಬಿದ್ದಾರೆ ಎನ್ನಲಾಗಿದೆ. ಈ ಸಂಧರ್ಭದಲ್ಲಿ ಅಕ್ರಮವಾಗಿ ಸಾಗಿಸುತ್ತಿರುವಾಗ ಸ್ಥಳೀಯರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಒಟ್ಟು 7 ಜಾನುವಾರಗಳನ್ನು ಪೊಲೀಸರು ವಶಕ್ಕೆ ಪಡೆದು ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.

RELATED ARTICLES  ಚುನಾವಣೆ ಅಂದಾಗ ಸೋಲು ಗೆಲುವು ಸಹಜ : ರೂಪಾಲಿ