ಶ್ರೀಕ್ಷೇತ್ರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದಾಂಡೇಲ,ಹಳಿಯಾಳ, ಜೊಯಿಡಾ ತಾಲ್ಲೂಕು ಹಾಗೂ ವಿಜಯಲಕ್ಷ್ಮೀ ಫೌಂಡೇಶನ್ ಮೂಡುಬಿದಿರೆ ಸಹಯೋಗದಲ್ಲಿ ರೈತರಿಗೆ ಗೇರು ಸಸಿ ವಿತರಣಾ ಕಾರ್ಯಕ್ರಮ ನಡೆಯಿತು .ಈ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತ್ ಸದಸ್ಯರಾದ ಮಹೇಶ್ವರಿ ಸಂಜೀವ ಮಿಸಾಳಿ ನೆರವೇರಿಸಿದರು. ಮತ್ತು ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಹಳಿಯಾಳ ಮುರ್ಕವಾಡದ ಗ್ರಾ.ಪಂಚಾಯತ ಅಧ್ಯಕ್ಷ ಮಾರುತಿ ಕಮ್ಮಾರ್ ವಹಿಸಿದ್ದರು.ಮುಖ್ಯ ಅತಿಥಿಯಾಗಿ ಎಸ್ಕೆ ಡಿ ಆರ್ ಡಿ ಪಿ ಯ ಜಿಲ್ಲಾ ನಿರ್ದೇಶಕರಾದ ಲಕ್ಷ್ಮಣ ಎಂ. ತಾಲೂಕಾ ಯೋಜನಾಧಿಕಾರಿಗಳಾದ ಹರಿಶ ಪಾವಸ್ಕರ್ , ಕೃಷಿ ಇಲಾಖೆಯ ಕೃಷಿ ಅಧಿಕಾರಿ ಈರಣ್ಣ ಹಾಜರಿದ್ದರು.ವಿನೋದ ನಾಯ್ಕ ನಿರೂಪಿಸಿದರು.

RELATED ARTICLES  ಪುರಾಣ ಪ್ರಸಿದ್ದ ಶ್ರೀ ಉಪ್ಪಲೆ ಮಹಾಲಿಂಗೇಶ್ವರ ದೇವರ ಮಹಾ ರಥೋತ್ಸವ ಸಂಪನ್ನ.