ಕುಮಟಾ: ಇಲ್ಲಿಯ ಸಂಸ್ಕøತಿ ಉಪನ್ಯಾಸ ವೇದಿಕೆ ಆಶ್ರಯದಲ್ಲಿ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ “ಕೃಷ್ಣಂ ವಂದೇ ಜಗದ್ಗುರುಮ್” ಎಂಬ ಉಪನ್ಯಾಸ ಹಾಗೂ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರಸಿದ್ಧ ವೈದ್ಯ ಹಾಗೂ ಸಾಮಾಜಿಕ ಕಾರ್ಯಕರ್ತ ಡಾ. ಜಿ. ಜಿ. ಹೆಗಡೆ ಭಗವಂತನ ಸಂಕಲ್ಪ ಮಾತ್ರದಿಂದ ಕಾರ್ಯಸಿದ್ಧಿ ಯಾಗುತ್ತದೆ ಎಂದರಲ್ಲದೇ ಗುರು ಮತ್ತು ಅಧ್ಯಾಪಕರ ವ್ಯತ್ಯಾಸವನ್ನು ತಿಳಿಸುತ್ತಾ ಗುರುವಾದವ ಶಾಶ್ವತ ಸ್ಥಾನ ಪ್ರೀತಿಯಿಂದ ಗಿಟ್ಟಿಸುತ್ತಾನೆಂದು ಗುರು ಗುಣಗಾನಗೈದರು. ಕೌರವಾದಿ ದುಷ್ಠಕೂಟಗಳನ್ನು ಧರ್ಮದಂತೆ ನಡೆದ ಪಾಂಡವರು ಯುದ್ಧಜೈಸಿದ ಬಗೆಯನ್ನು ತಿಳಿಸುತ್ತಾ ಯುದ್ಧದ ಕುಶಲೋಪಾಯಗಳನ್ನು ಕೃಷ್ಣನಿಂದಲ್ಲದೇ ಬೇರೆಯವರಿಂದ ಕಲಿಯಲಸಾಧ್ಯವೆಂದು ಮನಮುಟ್ಟುವ ಉಪನ್ಯಾಸ ನೀಡಿದರು.
ಇನ್ನೋರ್ವ ಅತಿಥಿ ಡಾ. ಅಶೋಕ ಭಟ್ ಹಳಕಾರ ಕೃಷ್ಣನ ಬಾಲ ಲೀಲೆಗಳಿಂದ ಹಿಡಿದು ಚತುರ ರಾಜಕೀಯ ನಡೆಯನ್ನು ತಿಳಿಸಿ ಕೃಷ್ಣ ಹೇಗೆ ಲೋಕಕ್ಕೆ ಪೂಜಿತ ಸ್ಥಾನವನ್ನು ಪಡೆದಿದ್ದಾನೆಂದು ವಿವರಿಸಿದರು.

RELATED ARTICLES  ಶೈಲಜಾ ಹೆಗಡೆಗೆ ಸಾಹಿತ್ಯ ಸಿಂಚನ ಶ್ರೀ ಪ್ರಶಸ್ತಿ.

ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯಾಧ್ಯಾಪಕ ಎನ್. ಆರ್. ಗಜು ಒಳಿತು ಕೆಡಕುಗಳ ವಿಂಗಡನೆಯ ಸೂಕ್ಷ್ಮತೆ ಜಟಿಲವಾಗಿರುವ ಇಂದಿನ ಸಾಮಾಜಿಕ ವ್ಯವಸ್ಥೆಗೆ ಗೀತೆಯಲ್ಲಿನ ಕೃಷ್ಣಾರ್ಜುನರ ಸಂವಾದದ ನೆರವಾಗಬಲ್ಲದು ಎಂದರು. ಈ ಸಂದರ್ಭದಲ್ಲಿ ಚುಟುಕು ಕವಿ ಬೀರಣ್ಣ ನಾಯಕ ಹಿರೇಗುತ್ತಿ ಮಾತನಾಡಿ ತಾವು ಪ್ರಕಟಿಸಿದ ಪುಸ್ತಕಗಳನ್ನು ಶಾಲೆಯ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು. ಪ್ರಾರಂಭದಲ್ಲಿ ಶಿಕ್ಷಕ ವಿಷ್ಣು ಎನ್.ಭಟ್ಟ ಸ್ವಾಗತಿಸಿದರು. ಸಂಸ್ಕøತಿ ಉಪನ್ಯಾಸ ವೇದಿಕೆಯ ಅಧ್ಯಕ್ಷ ಹಾಗೂ ಖ್ಯಾತ ಸಾಂಸ್ಕøತಿಕ ಅಂಕಣಕಾರ ಪ್ರೊ. ವಿಷ್ಣು ಜೋಶಿ ಪ್ರಾಸ್ತಾವಿಕ ಮಾತುಗಳಿಂದ ಕೃಷ್ಣ ವರ್ಣನೆ ಮಾಡಿದರು. ಶಿಕ್ಷಕ ಕಿರಣ ಪ್ರಭು ನಿರೂಪಿಸಿದರೆ, ಅನಿಲ್ ರೊಡ್ರಿಗೀಸ್ ವಂದಿಸಿದರು. “ಕೃಷ್ಣಂ ವಂದೇ ಜಗದ್ಗುರುಮ್” ವಿಷಯದ ಮೇಲೆ ಏರ್ಪಟ್ಟ ಭಾಷಣ ಸ್ಪರ್ಧೆಯಲ್ಲಿ ವಿಜೇತ ಕುಮಾರಿ ರಕ್ಷಿತಾ ಪಟಗಾರ, ಕುಮಾರಿ ಶ್ರೀಲಕ್ಷ್ಮಿ ಭಟ್ಟ ಮತ್ತು ಕುಮಾರ ಲಕ್ಷ್ಮೀಧರ ಗೌಡ ಕ್ರಮವಾಗಿ ರೂ.700, 500 ಮತ್ತು 300 ಗಳ ನಗದು ಬಹುಮಾನದಿಂದ ಪುರಸ್ಕರಿಸಲ್ಪಟ್ಟರು.

RELATED ARTICLES  ಕರಾವಳಿಯಲ್ಲಿ ಮಳೆ ಹಾಗೂ ಸಮುದ್ರದ ಅಲೆಗಳ ಭೀತಿಯಲ್ಲಿ ಜನತೆ!