Home Uttara Kannada ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆಯಾದ ದಿವ್ಯಾ ಎಂ.ಆಚಾರಿ

ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆಯಾದ ದಿವ್ಯಾ ಎಂ.ಆಚಾರಿ

ಹೊನ್ನಾವರದಲ್ಲಿ ನಡೆದ ಕಾರವಾರ ಶೈಕ್ಷಣಿಕ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕುಮಟಾ ತಾಲೂಕಿನ ವಿದ್ಯಾನಿಕೇತನ ಸಂಸ್ಥೆಯ, ಪ್ರಗತಿ ವಿದ್ಯಾಲಯ ಮೂರೂರಿನ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ಕುಮಾರಿ ದಿವ್ಯಾ ಎಂ.ಆಚಾರಿ ಇವಳು ಕನ್ನಡ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದಿರುತ್ತಾಳೆ.ಗ್ರಾಮೀಣ ವಿದ್ಯಾರ್ಥಿನಿಯ ಈ ಸಾಧನೆಯನ್ನು ಸಂಸ್ಥೆಯ ಕಾರ್ಯಾಧ್ಯಕ್ಷರಾದ ಶ್ರೀ ಆರ್. ಜಿ. ಭಟ್ ಹಾಗು ಸದಸ್ಯರು,ಮುಖ್ಯಾಧ್ಯಾಪಕರಾದ ಶ್ರೀ ವಿ.ಎಸ್.ಗೌಡ ಮತ್ತು ಶಿಕ್ಷಕರು ಅಭಿನಂದಿಸಿರುತ್ತಾರೆ.