ಭಟ್ಕಳ: ಜಗಳ ಆಗುತ್ತಿದ್ದ ಸಂದರ್ಭದಲ್ಲಿ ಭಟ್ಕಳ ತಾಲ್ಲೂಕಿನ ದೇವಿಯ ಶಕ್ತಿಸನ್ನಿದಿ ಸೋಡಿಗದ್ದೆ ಮಹಾಸತಿ ದೇವಿಯ ಮೇಲೆ ಆಣೆ ಮಾಡಿಕೊಂಡ ಭಕ್ತರೊಬ್ಬರು ದೇವಿಗೆ ಬೈಕನ್ನು ಹರಕೆಯ ರೂಪದಲ್ಲಿ ಸಲ್ಲಿಸಿ ತಮ್ಮ ಭಕ್ತಿಯ ಪಾರಮ್ಯ ಮೆರೆದಿದ್ದಾರೆ.

ನೆರೆಯ ಬೈಂದೂರು ತಾಲ್ಲೂಕು ಉಪ್ಪುಂದದ ಮೀನುಗಾರಿಕೆ ವೃತ್ತಿ ಮಾಡುವ ನವೀನ್ ಚಂದ್ರ ಎಂಬುವರು, ಯಾವುದೋ ವಿಷಯಕ್ಕೆ ವ್ಯಕ್ತಿಯೊಬ್ಬರ ನಡುವೆ ಜಗಳ ನಡೆದಾಗ ಅವರು ಬೈಕ್ ನ ಕೀಯನ್ನು ತೆಗೆದುಕೊಂಡರು. ಇದರಿಂದ ಕೋಪಗೊಂಡ ನವೀನ್ ಚಂದ್ರ ಅವರು, ಕೀಯನ್ನು ವಾಪಸ್ಸು ಕೊಡದಿದ್ದಲ್ಲಿ ಸೋಡಿಗದ್ದೆ ದೇವಿಯ ಮೇಲೆ ಆಣೆ ಇಡುವುದಾಗಿ ಮತ್ತು ಬೈಕನ್ನು ಹರಕೆಯಾಗಿ ನೀಡುವುದಾಗಿ ಹೇಳಿ, ತಿಂಗಳ ಹಿಂದೆ ಬೈಕನ್ನು ಸೋಡಿಗದ್ದೆಗೆ ತಂದು ದೇವಸ್ಥಾನದ ಮುಂದೆ ತಂದು ನಿಲ್ಲಿಸಿ, ಬೈಕ್ ನ ದಾಖಲೆ ಪತ್ರಗಳನ್ನು ಆಡಳಿತ ಸಮಿತಿಗೆ ಒಪ್ಪಿಸಿ ತೆರಳಿದರು.

RELATED ARTICLES  ನೂತನ ಕಟ್ಟಡಕ್ಕೆ ಸ್ಥಳಾಂತರವಾದ ಕಂಪ್ಯೂಟರ್ ಲ್ಯಾಂಡ್

ದೇವಿಗೆ ಭಕ್ತರೊಬ್ಬರು ಬೈಕ್ ರೂಪದಲ್ಲಿ ಹರಕೆ ಸಲ್ಲಿಸಿದ್ದು ಇದೇ ಮೊದಲು. ಅದನ್ನು ದೇವಿಗೆ ಹೇಗೆ ಸಲ್ಲಿಸುವುದು ಎಂದು ಚಿಂತಿಸಿದ ದೇವಸ್ಥಾನದ ಆಡಳಿತಾಧಿಕಾರಿ ತಹಶೀಲ್ದಾರ್ ವಿ. ಪಿ ಕೊಟ್ರಳ್ಳಿ ಮತ್ತು ದೇವಸ್ಥಾನದ ವ್ಯವಸ್ಥಾಪಕ ನಾಗರಾಜ್ ಅವರು, ಶನಿವಾರ ಮಧ್ಯಾಹ್ನದ ವೇಳೆ ಬೈಕ್ ನೀಡಿದ್ದ ಭಕ್ತ ನವೀನ್ ಚಂದ್ರ ಅವರನ್ನು ಕರೆಸಿದರು. ನಂತರ ಅವರ ಮನವೊಲಿಸಿ, ಬೈಕ್ ನ ಬೆಲೆ ನಿಗದಿ ಮಾಡಿ, ಭಟ್ಕಳದ ಆಸಿಫ್ ಎಂಬುವರಿಗೆ ₹8 ಸಾವಿರಕ್ಕೆ ಮಾರಾಟ ಮಾಡಿ, ಅವರು ನೀಡಿದ ಹಣವನ್ನು ದೇವಸ್ಥಾನದ ಖಾತೆಗೆ ವರ್ಗಾಯಿಸಿ, ಪ್ರಕರಣವನ್ನು ಸುಖಾಂತ್ಯಗೊಳಿಸಿದರು.

RELATED ARTICLES  ವಿದ್ಯುತ್ ತಿದ್ದುಪಡಿ ವಿದೇಯಕ ವಿರೋಧಿಸಿ ಶಿವಾನಂದ ಹೆಗಡೆ ಕಡತೋಕಾ ನೇತ್ರತ್ವದಲ್ಲಿ ಮನವಿ ಸಲ್ಲಿಕೆ