ಕುಮಟಾ : ಪಂ. ಷಡಕ್ಷರಿ ಗವಾಯಿ ಪುಣ್ಯ ಸ್ಮರಣೆ ಹಾಗೂ ಷಡಕ್ಷರಿ ರಾಷ್ಟ್ರೀಯ ಪುರಸ್ಕಾರ ಕಾರ್ಯಕ್ರಮವು ಕೂಜಳ್ಳಿ ಕುಳಿಹಕ್ಕಲ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದಲ್ಲಿ ಭಾನುವಾರ ಜರುಗಿತು. ಷಡಕ್ಷರಿ ಪ್ರಶಸ್ಥಿಯನ್ನು ಮಧ್ಯಪ್ರದೇಶ ಕೈರಾಗಾರ್ ಪಂ. ಮುಕುಂದ್ ಭಾಲೆ ಅವರಿಗೆ ಪ್ರದಾನ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಮಾಜಿ ಸಂಸದ ಹುಬ್ಬಳ್ಳಿಯ ಐ.ಜಿ.ಸನದಿ ಮಾತನಾಡಿ, ಸಂಗೀತವು ವಿಶ್ವ ಭ್ರಾತೃತ್ವವನ್ನು ಬೆಳೆಸಲು ಸಹಕಾರಿಯಾಗಿದೆ. ಶಾಂತಿ ಸೌಹಾರ್ದವನ್ನು ಬೆಳೆಸುತ್ತದೆ. ಸಮಗೀತ ಒಂದು ತಪಸ್ಸು ಇದ್ದಂತೆ. ಸೌಜನ್ಯದ ಪೂಜೆ ಇದಾಗಿದ್ದು, ಪ್ರೇಮ ಪ್ರಸಾದವನ್ನು ನೀಡುತ್ತದೆ. ಅಗಣಿತ ತಾರೆಗಳನ್ನು ಅರಳಿಸುವಲ್ಲಿ ಸಂಗೀತ ಕಾಯ್ಕ್ರಮಗಳಿ ಪೂರಕವಾಗುತ್ತವೆ. ದಿ.ಗವಾಯಿಗಳು ಮರೆಯಲಾಗದ ಸೇವೆ ಸಲ್ಲಿಸಿದವರಾಗಿದ್ದಾರೆ. ಆದ ಕಾರನ ಈ ಭಾಗದಲ್ಲಿ ಚಿರಾಯುವಾಗಿದ್ದಾರೆ. ಅವರ ನೆನಪಿಗಾಗಿ ಮಾಡುತ್ತಿರುವ ಈ ಕಾರ್ಯಕ್ರಮಗಳು ಶ್ಲಾಘನೀಯವಾಗಿದೆ ಎಂದರು. ಭಾಗವತ ಮೂರೂರಿನ ಸರ್ವೇಶ್ವರ ಹೆಗಡೆ, ಕೃಷ್ಣ ಯಾಜಿ ಇಡಗುಂಜಿ ಹಾಗೂ ಪಿ.ಕೆ.ಹೆಗಡೆ ಹರಿಕೇರಿ ಇವರು ಯಕ್ಷಗಾನ ಹಿಮ್ಮೇಳ ನಡೆಸಿದರು.
ಅತಿಥಿಯಾಗಿ ಪತ್ರಕರ್ತ ವಿಠ್ಠಲದಾಸ್ ಕಾಮತ್ ಮಾತನಾಡಿ, ಷಡಕ್ಷರಿ ಗವಾಯಿಗಳು ಆರ್ಥಿಕವಾಗಿ ಬಡವರಾಗಿದ್ದರೂ ಬೇರೆ ಯಾವ ಬಡತನವು ಅವರಲ್ಲಿ ಇಲ್ಲವಾಗಿತ್ತು. ಇಂತಹ ಶ್ರೇಷ್ಠ ವ್ಯಕ್ತಿತ್ವ ಹೊಂದಿದವರನ್ನು ರಾಷ್ಟ್ರಮಟ್ಟದಲ್ಲಿ ಪರಿಚಯಿಸು ಈ ಕಾರ್ಯ ಶ್ಲಾಘನೀಯವಾಗಿದೆ. ದೇವರನ್ನು ಸೇರಲು ಸಮಗೀತವು ಮಾರ್ಗವಾಗಿದೆ. ಸಂಗೀತದಿಂದ ಮಾನಸಿಕ ದೃಢತೆ ಹೆಚ್ಚುತ್ತದೆ. ಇಂದಿನ ಯುವಕರಿಗೆ ಬದುಕನ್ನು ಎದುರಿಸುವ ಶಿಕ್ಷಣದ ಅವಶ್ಯಕತೆ ಇದೆ ಎಂದರು. ಅತಿಥಿಗಳಾಗಿ ಅಗ್ರಹಾರದ ಡಾ.ಜಿ.ಜಿ.ಸಭಾಹಿತ ಮತ್ತು ರಂಗ ನಿರ್ದೇಶಕ ಹೊನ್ನಾವರದ ಕಿರಣ ಭಟ್ಟ ಮಾತನಾಡಿದರು. ಪ್ರಾರಂಭದಲ್ಲಿ ಕಾರ್ಯಕ್ರಮವನ್ನು ಡಾ.ಅನಿಲ ಹೆಗಡೆ ಕುಮಟಾ ಹಾಗೂ ಕೂಜಳ್ಳಿ ಸ್ವರ ಸಂಗಮ ಅಧ್ಯಕ್ಷ ಸುಬ್ರಾಯ ಭಟ್ಟ ಉದ್ಘಾಟಿಸಿದರು. ಪತ್ರಕರ್ತ ರಘುಪತಿ ಯಾಜಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಟಿ.ಎನ್. ಭಟ್ಟ ಕಾರ್ಯಕ್ರಮ ನಿರೂಪಿಸಿದರು. ರಾಜು ಲಮಾಣಿ ವಂದಿಸಿದರು.ವಸಂತ ರಾವ್ ಇನ್ನಿತರರು ಇದ್ದರು.
ಗಣಪತಿ ಭಟ್ಟ ಹಾಸಣಗಿ ಅವರ ಗಾಯನದಲ್ಲಿ ತಬಲಾ ಪ್ರೊ. ಗೋಪಾಲಕೃಷ್ಣ ಹೆಗಡೆ ಕಲ್ಬಾಗ, ಸಂವಾದಿನಿ ಗೌರೀಶ ಯಾಜಿ ಕೂಜಳ್ಳಿ ಸಾಥ್ ನೀಡಿದರು.
ಗಾಯನ ಜುಗಲ್ಬಂಧಿಯಲ್ಲಿ ರಂಜನಾ ಆಚಾರ್ಯ ಕುಮಟಾ ಹಾಗೂ ಶ್ರೀಲತಾ ಗುರುರಾಜ ಹೊನ್ನಾವರ ಅವರು ತಬಲಾ ಪ್ರೊ.ಎನ್.ಜಿ.ಅನಂತಮೂರ್ತಿ ಗುಣವಂತೆ, ಸಂವಾದಿನಿ ಅಜೇಯ ಹೆಗಡೆ ಶಿರಸಿ ಇವರಿಂದ ಜರುಗಿತು.
ತಬಲಾ ಸೊಲೊ ಪ್ರದ್ಯಮ್ನ ಕಪೂರ್ ಬೆಂಗಳೂರು ನಡೆಸಿಕೊಟ್ಟರು.
ಬಳಿಕ ವಿಶ್ವೇಶ್ವರ ಭಟ್ಟ ಖರ್ವಾ ಗಾಯನ, ತಬಲಾ ರಂಗ ಪೈ ಮಣಿಪಾಲ, ಸಂವಾದಿನಿ ಸುರೇಶ ಭಟ್ಟ ಕಡತೋಕಾ ಅವರಿಂದ, ಹಾಗೂ ವಂಶೀವಾದನ ಈಶ್ವರ ಶಾಸ್ತ್ರೀ ಹೊಸಾಕುಳಿ, ಭಾರ್ಗವ್ ರಾವ್ ಬೆಂಗಳೂರು, ಕಿಶೋರ ಹೆಗದೆ ಮುಂಬಯಿ ಮತ್ತು ತಬಲಾ ಸಾಥ್ ಪರಮೇಶ್ವರ ಹೆಗಡೆ ಮೈಸೂರು ಅವರಿಂದ ಜರುಗಿತು.
ಪಂ. ಮುಕುಂದ್ ಭಾಲೆ, ಕೈರಾಗರ್, ಮಧ್ಯಪ್ರದೇಶ ಅವರಿಂದ ತಬಲಾ ಸೋಲೊ ಹಾಗೂ ಗಾಯನ ಪಂ. ಶಾಲ್ಮಲಿ ಜೋಶಿ ಮುಂಬಯಿ, ತಬಲಾ ಡಾ.ಉದಯರಾಜ್ ಕರ್ಪೂರ್ ಬೆಂಗಳೂರು, ಸಂವಾದಿನಿ ಗೌರೀಶ ಯಾಜಿ ಕೂಜಳ್ಳಿ ಅವರಿಂದ ನಡೆಯಿತು. ಪಂ.ರಾಜೇಂದ್ರ ಪ್ರಸನ್ ದೆಹಲಿ ಅವರ ಬಾನ್ಸುರಿ ಹಾಗೂ ಪಂ.ರವೀಂದ್ರ ಯಾವಗಲ್ ಬೆಂಗಳೂರು ತಬಲಾ ಸಾಥ್ ನೀಡಿದರು.