ಭಟ್ಕಳ:ಅಪ್ರಾಪ್ತೆಯ ಮೇಲೆ ನಿರಂತರವಾಗಿ ಲೈಂಗಿಕ ಅತ್ಯಾಚಾರ ನಡೆಸಿ ಆಕೆಯನ್ನು ಗರ್ಭಿಣಿಯನ್ನಾಗಿದ ವ್ಯಕ್ತಿ ಅತ್ಯಾಚಾರಕ್ಕೊಳಗಾಗಿರುವ ಆಪ್ರಾಪ್ತೆಯ ಸ್ವಂತ ಅಕ್ಕನ ಗಂಡ(ಭಾವ) ಎಂಬ ವಿಷಯ ಪೊಲೀಸ ತನಿಖೆಯಿಂದ ಬಹಿರಂಗಗೊಂಡಿದ್ದು ಆರೋಪಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಕೆಲವು ದಿನಗಳ ಹಿಂದೆ ಹೆಬಳೆ ಪಂಚಾಯತ್ ವ್ಯಾಪ್ತಿಯ ಹನೀಫಾಬಾದ್ ಪ್ರದೇಶದಲ್ಲಿ ಅಪ್ರಾಪ್ತೆ ಬಾಲಕಿಯೊಂದಿಗೆ ಲೈಂಗಿಕ ದೌರ್ಜನ್ಯ ನಡೆಸಿ ಗರ್ಭಿಣಿಯಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರೊಂದು ದಾಖಲಾಗಿದ್ದು ಘಟನೆಯ ತನಿಖೆಯನ್ನು ನಡೆಸಿದ ಪೊಲೀಸರು ನೈಜ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಹಾವೇರಿ ಜಿಲ್ಲೆಯ ಖಾಜಾ ಸಾಬ್ ಯಾನೆ ಖಾಜಾ ಮೊಯಿನು ಎಂದು ಗುರುತಿಸಲಾಗಿದ್ದು ಮನೆಯಲ್ಲಿ ತನ್ನ ಪತ್ನಿ ಇಲ್ಲದ ಸಂದರ್ಭದಲ್ಲಿ ಪತ್ನಿಯ ಆಪ್ರಾಪ್ತ ತಂಗಿಯನ್ನೆ ತನ್ನ ಲೈಂಗಿಕ ತಿಟೆ ತೀರಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದ ಎಂಬ ಸಂಗತಿ ಪೊಲೀಸ್ ತನಿಖೆಯಿಂದ ಹೊರಬಿದ್ದಿದೆ.