ಕುಮಟಾ: ಇಲ್ಲಿಯ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಡಾ.ಬಿ.ಎ.ಸನದಿ ಬುಕ್ ಕಾರ್ನರ್‍ಗೆ ಸಾಹಿತಿ ಕೆ.ವಿ.ತಿರುಮಲೇಶ್ ಅವರ ‘ವಾಚನಶಾಲೆ’ ಎಂಬ ಸಾಹಿತ್ಯ, ಸಂಸ್ಕøತಿ ವಿಚಾರದ ಅಂಕಣ ಬರಹದ ಕೃತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಕನ್ನಡ ಲೇಖಕರ ಬದುಕು-ಬರಹದ ಹೊತ್ತಿಗೆ ಮತ್ತು ಕೆ.ವಿ.ಸುಬ್ಬಣ್ಣ ನೆನಪಿನ ಮೊದಲ ಓದು ಪುಸ್ತಕಮಾಲೆಯ ಆಯ್ದ ಕವಿತೆಗಳ ಪುಸ್ತಕಗಳನ್ನು, ಸಾಹಿತಿಗಳಾದ ನಿವೃತ್ತ ಪ್ರಾಧ್ಯಾಪಕ ಪ್ರೊ. ಟಿ.ಜಿ.ಭಟ್ಟ ಹಾಸಣಗಿ ಹಾಗೂ ನಿವೃತ್ತ ಕರ್ನಾಟಕ ಬ್ಯಾಂಕಿನ ಪ್ರಬಂಧಕ ಚಂದ್ರಶೇಖರ ಉಪಾಧ್ಯಾಯ ಅವರು ನೀಡಿದರು. ಪುಸ್ತಕ ಸ್ವೀಕರಿಸಿದ ಮುಖ್ಯಾಧ್ಯಾಪಕ ಎನ್.ಆರ್.ಗಜು, ತಿರುಮಲೇಶ್ ಅವರ ಸಾಹಿತ್ಯ ಓದನ್ನು ಹಮ್ಮಿಕೊಳ್ಳುವ ಇಚ್ಛೆಗೆ ಸಹಮತ ವ್ಯಕ್ತಪಡಿಸಿದರು. ಕೆ.ವಿ.ತಿರುಮಲೇಶ್ ಸಾಹಿತ್ಯ ವಿಚಾರವನ್ನು ಕನ್ನಡ ಪಂಡಿತ ಸುರೇಶ ಪೈ, ಶಿಕ್ಷಕರಾದ ಪ್ರದೀಪ ನಾಯ್ಕ, ವಿ.ಎನ್.ಭಟ್ಟ, ಕಿರಣ ಪ್ರಭು ಮೊದಲಾದವರೊಡನೆ ಚರ್ಚಿಸಿದರು.