ಕುಮಟಾ: ಕೇಂದ್ರ ಸರ್ಕಾರದ ಫಿಟ್ ಇಂಡಿಯಾ ಅಭಿಯಾನದ ಅಡಿಯಲ್ಲಿ ಪಟ್ಟಣದ ಶ್ರೀ ವಿದ್ಯಾಧಿರಾಜ  ಪಾಲಿಟೆಕ್ನಿಕ್ ಕಾಲೇಜಿನ ಸ್ಟಾಫ್ ರಿಕ್ರಿಯೇಶನ್ ಕ್ಲಬ್ಬಿನ ಸಹಯೋಗದಲ್ಲಿ ಉತ್ತರ ಕನ್ನಡ ಜಿಲ್ಲಾ ಪಾಲಿಟೆಕ್ನಿಕ್ ಸಿಬ್ಬಂದಿಗಳ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿಯನ್ನು ಕುಮಟಾ ಕೆನರಾ ಕಾಲೇಜು ಸೊಸೈಟಿಯ ಮೈದಾನದಲ್ಲಿ  ಡಿ. ೬ ಹಾಗೂ ೭ ರಂದು ನಡೆಸಲು ನಿರ್ಧರಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ರತನ್ ಗಾಂವಕರ ತಿಳಿಸಿದರು. 

ಬುಧವಾರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,” ಶಿಕ್ಷಕರು ಮತ್ತು ಸಿಬ್ಬಂದಿಗಳ ದೈಹಿಕ ಆರೋಗ್ಯ ಉತ್ತಮವಾಗಿದ್ದರೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ. ಈ ನಿಟ್ಟಿನಲ್ಲಿ  ಈ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ತಾಂತ್ರಿಕ ಶಿಕ್ಷಣ ವಿಭಾಗವೂ ಇದಕ್ಕೆ ಅನುಮತಿ ನೀಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ನಮ್ಮ ಪಾಲಿಟೆಕ್ನಿಕ್ ಸಿಬ್ಬಂದಿಗಳ ಪಂದ್ಯಾವಳಿ ನಡೆಯುತ್ತಿರುವುದು ಸಂತಸದ ಸಂಗತಿ. ಇದರಿಂದಾಗಿ ಶಿಕ್ಷಕರು ಹಾಗೂ ಸಿಬ್ಬಂಧಿಗಳ ಉತ್ಸಾಹ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಎಲ್ಲಾ ಕಾಲೇಜುಗಳಿಗೂ ಈ ಕಾರ್ಯಕ್ರಮ ಒಂದು ಪ್ರೇರಣೆಯಾಗಬಹುದು “ಎಂದರು.

RELATED ARTICLES  ಸಿದ್ದಾಪುರದಲ್ಲಿ ಬೆಂಕಿ ಅವಘಡ: ವಿದ್ಯುತ್ ತಂತಿ ತಗುಲಿ ಕರಕಲಾಯ್ತು ಹುಲ್ಲು

ಪಂದ್ಯಾವಳಿ ಸಂಯೋಜಕ ಅಶೋಕ ಎನ್.ಎಸ್ ಮಾತನಾಡಿ,”  ಟಿ೨೦ ಮಾದರಿಯ ಟೆನಿಸ್ ಬಾಲ್ಕ್ರಿಕೆಟ್ ಪಂದ್ಯಾವಳಿಯಲ್ಲಿ ಜಿಲ್ಲೆಯ ಶಿರಸಿ, ಸಿದ್ದಾಪುರ, ಜೊಯಿಡಾ, ಮುರುಡೇಶ್ವರ, ಕಾರವಾರ ಹಾಗೂ ಕುಮಟಾ ಪಾಲಿಟೆಕ್ನಿಕ್ ಕಾಲೇಜುಗಳ ಸಿಬ್ಬಂಧಿಗಳ  ತಂಡದ ನಡುವೆ ಈ ಸ್ಪರ್ಧೆ ನಡೆಯಲಿದೆ. ಅಲ್ಲದೇ ಆಡಳಿತ ಮಂಡಳಿಯೂ ಸಹ ಈ ಪಂದ್ಯಾವಳಿಗೆ ತಮ್ಮ ಸಂಪೂರ್ಣ ಸಹಕಾರ ನೀಡುತ್ತಿರುವುದು ಸಂತಸದ ಸಂಗತಿ “ಎಂದರು. 

RELATED ARTICLES  ನಾವು ಅಧಿಕಾರಕ್ಕೆ ಬಂದ್ರೆ ತಕ್ಷಣ ಕೆಪಿಎಂಇ ಕಾಯ್ದೆ ರದ್ದು; ಯಡಿಯೂರಪ್ಪ

ಈ ಸಂಧರ್ಭದಲ್ಲಿ ಕೆನರಾ ಕಾಲೇಜು ಸೊಸೈಟಿ ಕಾರ್ಯಾಧ್ಯಕ್ಷ ಮುರಲೀಧರ ಪ್ರಭು, ಸದಸ್ಯರಾದ ವಿನೋದ ಪ್ರಭು, ಶಿಕ್ಷಕ ಪ್ರಕಾಶ ನಾಯಕ, ಕುಮಾರ ನಾಯ್ಕ ಸೇರಿದಂತೆ ಇತರರು ಇದ್ದರು.