ಕುಮಟಾ: ಇಲ್ಲಿಯ ಪ್ರತಿಷ್ಠಿತ ಕೆನರಾ ಎಜ್ಯುಕೇಶನ್ ಸೊಸೈಟಿಯ ಗೌರವ ಕಾರ್ಯದರ್ಶಿಯಾಗಿ, ಗಿಬ್ ಹೈಸ್ಕೂಲಿನ ಹಳೆಯ ವಿದ್ಯಾರ್ಥಿ ಹಾಗೂ ಸುದೀರ್ಘ ಕಾಲ ಹಿಂದಿ ಶಿಕ್ಷಕಿಯಾಗಿ ಹಾಗೂ ಭಾರತ ಸೇವಾದಳದಲ್ಲಿ ಸೇವೆಗೈದು, ನಿವೃತ್ತಿ ತರುವಾಯ ಆಡಳಿತ ಮಂಡಳಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ, ತರುವಾಯ ಗೌರವ ಕಾರ್ಯದರ್ಶಿಯಾಗಿದ್ದ, ಸಾಮಾಜಿಕವಾಗಿ ಉತ್ತಮ ಸಂಬಧ ಹೊಂದಿದ್ದ, ಮಮತಾಮಯಿ ಕಮಲಾ ರಾವ್ (ವ.೮೬) ನಿನ್ನೆ (ದಿ.೫ ರಂದು ಮಧ್ಯಾಹ್ನ ೧೨ ಗಂಟೆಗೆ) ತಮ್ಮ ಮನೆಯಲ್ಲಿ ಲಘು ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಅವರ ಗೌರವಾರ್ಥ ಸೊಸೈಟಿಯ ಅಂಗ ಸಂಸ್ಥೆಗಳಾದ ಗಿಬ್ ಹೈಸ್ಕೂಲ್, ಗಿಬ್ ಬಾಲಕಿಯರ ಪ್ರೌಢಶಾಲೆ, ಮಹಾತ್ಮಾ ಗಾಂಧಿ ಪ್ರೌಢಶಾಲೆ, ಗಿಬ್ ಆಂಗ್ಲ ಮಾಧ್ಯಮ ನರ್ಸರಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಮೌನ ಪ್ರಾರ್ಥನೆ ನಡೆಸಿ ಬಿಡುವು ನೀಡಲಾಗಿತ್ತು.
ಕೆನರಾ ಎಜ್ಯಕೇಶನ್ ಸೊಸೈಟಿಯ ಕಾರ್ಯಾಧ್ಯಕ್ಷ ವಸುದೇವ ವಾಯ್.ಪ್ರಭು, ಕಾರ್ಯದರ್ಶಿ ಶ್ರೀನಿವಾಸ ಪ್ರಭು, ಸದಸ್ಯ ಕೃಷ್ಣದಾಸ ಪೈ, ಮುಖ್ಯಾಧ್ಯಾಪಕರಾದ ಡಿ.ಜಿ.ಶಾಸ್ತಿç, ಎನ್.ಆರ್.ಗಜು, ವಿನಾಯಕ ಶಾನಭಾಗ, ಗೀತಾ ಪೈ, ಗಿಬ್ ಹೈಸ್ಕೂಲಿನ ನಿವೃತ್ತ ಮುಖ್ಯಾಧ್ಯಾಪಕ ಮುರಲೀಧರ ಪ್ರಭು, ಜ್ಞಾನದಾ ಶಾನಭಾಗ, ಆರ್.ಡಿ.ಪ್ರಭು, ಮಂಗಳಾ ಪೈ, ದಾಮೋದರ ಗಾವಡಿ, ಭಾರತ ಸೇವಾದಳದ ಎಂ.ಬಿ.ಪೈ, ಎನ್.ಎನ್.ಪಟಗಾರ, ಕಿರಣ ನಾಯ್ಕ, ಎನ್.ಟಿ.ಪ್ರಮೋದ್ ರಾವ್, ಮಧುಸೂದನ ಶೇಟ್ ಮೊದಲಾದವರು ಅಂತಿಮ ದರ್ಶನ ಪಡೆದು ಮೃತರ ಪುತ್ರ ದೂರದರ್ಶನ ವರದಿಗಾರ ಗಣೇಶ ರಾವ್ ಅವರಿಗೆ ಸಾಂತ್ವನ ಹೇಳಿದರು.