ಪಾಠದ ಸಮಯದಲ್ಲಿ ಶಿಕ್ಷಕರನ್ನು ತರಬೇತಿಗೆ ಕಳಿಸುವುದರಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿವೆ ಶಿಕ್ಷಕರು ತರಬೇತಿಗೆ ಹೋದರೆ ಅವರ ಪಾಠವನ್ನು ವಿದ್ಯಾರ್ಥಿಗಳಿಗೆ ಕಲಿಸುವುವರು ಯಾರು ಎನ್ನುವುದು ವಿದ್ಯಾರ್ಥಿಗಳ ಮತ್ತು ಪಾಲಕರ ಪ್ರಶ್ನೆ….?? ಶಿಕ್ಷಕರನ್ನುಪಾಠದ ಸಮಯದಲ್ಲಿ ತರಬೇತಿಗೆ ಕಳಿಸಿ ಆ ಸಮಯದಲ್ಲಿ ಕನ್ನಡ ಶಾಲೆಯಲ್ಲಿ ಮಕ್ಕಳಿಗೆ ಆಟ ಆಡಲು ಬಿಟ್ಟು ಸರಿಯಾದ ಶಿಕ್ಷಣ ಕೊಡಲಾಗದೇ ಕೊನೆಯಲ್ಲಿ ಸಮಯ ಸಾಲದೇ ಶಿಕ್ಷಕರು ಮಕ್ಕಳಿಗೆ ಪಾಠ ತರಾತುರಿಯಲ್ಲಿ ಬೇಗ ಬೇಗ ಓದಿ ಮುಗಿಸಬೇಕಾಗುತ್ತೆ. ಇದೇ ಪ್ರಮುಖ ಕಾರಣಕ್ಕೆ ಸರ್ಕಾರಿ ಕನ್ನಡ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗುತ್ತಿವೆ.

RELATED ARTICLES  ಹಿಂದೂ ಜಾಗರಣಾ ವೇದಿಕೆಯಿಂದ ನವರಾತ್ರಿ ಅಂಗವಾಗಿ ಆಯುಧ ಪೂಜೆ ಹಾಗೂ ದುರ್ಗಾದೌಡ

ಸಾರ್ವಜನಿಕರ ಪ್ರಕಾರ ತರಬೇತಿ ಅನಿವಾರ್ಯ ಹೌದು ಪಾಠದ ಸಮಯದಲ್ಲಿ ಬೇಡ ತರಬೇತಿ ನೀಡಿ ಜೂನ್ ಆರಂಭದಲ್ಲಿ ೧೦ ದಿನ ಪರೀಕ್ಷೆಯ ನಂತರ ೧೦ ದಿನ ತರಬೇತಿ ನೀಡಲಿ ಎನ್ನುವುದಾಗಿದೆ ಎಲ್ಲಾ ನುರಿತ ಶಿಕ್ಷಕರಿದ್ದಾರೆ. ತರಬೇತಿ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸಲು ಎಡವಿರಬಹುದು ಎನ್ನುವುದು ಸ್ಥಳೀಯ ಕನ್ನಡ ಶಾಲೆಯಲ್ಲಿ ಇರುವ ವಿದ್ಯಾರ್ಥಿಗಳ ಪಾಲಕರ ಅಭಿಪ್ರಾಯವಾಗಿದೆ. ಇನ್ನಾದರೂ ಅರಿತು ಜಿಲ್ಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶೂಕ್ತ ಕ್ರಮ ತೆಗೆದು ಕೊಳ್ಳಲಿ ಎನ್ನುವುದು ಪಾಲಕರ ಅಭಿಪ್ರಾಯವಾಗಿದೆ

RELATED ARTICLES  ಉದ್ಯಾನವನಕ್ಕೆ ಕುಡುಕರ ಕಾಟ! ಅಯ್ಯೋ ಯಲ್ಲಾಪುರದಲ್ಲಿ ಇದೆಂತಹಾ ಗತಿ!