ಕಾರವಾರ : ಶಿರಸಿಯ ಅರಣ್ಯ ಜೀವ
ವಿಜ್ಞಾನ ಮತ್ತು ವೃಕ್ಷಾಭಿವೃಧ್ಧಿ ವಿಭಾಗದಲ್ಲಿ
ಕಾರ್ಯನಿರ್ವಹಿಸಲು ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ನೇಮಕಾತಿಯು ತಾತ್ಕಾಲಿಕವಾಗಿದ್ದು, ಅರಣ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಮತ್ತು ನೆಟ್ ಪರೀಕ್ಷೆ ತೇರ್ಗಡೆಯಾದವರು ಹಾಗೂ ಅರಣ್ಯ ವಿಭಾಗದಲ್ಲಿ ನೆಟ್ ತೇರ್ಗಡೆಯೊಂದಿಗೆ ಡಾಕ್ಟರೇಟ್ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಅರ್ಜಿ ನಮೂನೆಯ 2 ಪ್ರತಿ ಹಾಗೂ ಎಲ್ಲ ಮೂಲ ದಾಖಲೆಗಳು ಹಾಗೂ ಅವುಗಳ 2 ಧೃಡೀಕೃತ ಪ್ರತಿಗಳನ್ನು ಡಿ. 20 ರಂದು ಬೆಳಿಗ್ಗೆ 11 ಗಂಟೆಗೆ ಶಿರಸಿಯ ಅರಣ್ಯ ಮಹಾ ವಿದ್ಯಾಲಯದ ಡೀನ್ ಕಾರ್ಯಾಲಯದಲ್ಲಿ ಸಂದರ್ಶನಕ್ಕೆ ಹಾಜರಾಗಲು ತಿಳಿಸಲಾಗಿದೆ.