ಅಂಕೋಲಾ : ನಗರದ ಕೆರೆಕಂಟೆ ಲಕ್ಷ್ಮೇಶ್ವರದಲ್ಲಿರುವ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಡಿ. 11 ಬುಧವಾರ ರಂದು ‘ದತ್ತ ಜಯಂತಿ ಉತ್ಸವ’ವನ್ನು ಅತ್ಯಂತ ವಿಜ್ರಂಭಣೆಯಿಂದ ಆಚರಿಸಲಾಗುವುದು. ಬೆಳಿಗ್ಗೆ 8.30 ಗಂಟೆಯಿಂದ ಅಭಿಷೇಕ, ಮದ್ಯಾಹ್ನ 1 ಗಂಟೆಯಿಂದ ಮಹಾಪೂಜೆ ನಂತರ‘ಅನ್ನ ಸಂತರ್ಪಣೆ’ ಇರುತ್ತದೆ. ಅದೇ ದಿನ ರಾತ್ರಿ 8 ಗಂಟೆಗೆ ದೇವಸ್ಥಾನದ ಆವರಣದಲ್ಲಿ ‘ಪಲ್ಲಕ್ಕಿ ಮೆರವಣಿಗೆ’ ಹಾಗೂ ಸವಾಲ ಕಾರ್ಯಕ್ರಮ ಹಾಗೂ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಡಿ.12 ಗುರುವಾರ ರಂದು ನಾಟ್ಯ ಮಂಡಳಿಯ ವತಿಯಿಂದ ಶ್ರೀ ದೇವರ ಪಲ್ಲಕ್ಕಿ ಉತ್ಸವ ನಗರ ಪ್ರದಕ್ಷಿಣೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸರ್ವಭಕ್ತರು ತನು-ಮನ-ಧನದಿಂದ ಕೃಥಾರ್ಥರಾಗುವುದು ಹಾಗೂ ಈ ಎಲ್ಲಾ ಕಾರ್ಯಕ್ರಮಕ್ಕೆ ಭಕ್ತರು ತಮ್ಮ ಕುಟುಂಬ ಸಮೇತರಾಗಿ ಬಂದು ಈ ಕಾರ್ಯಕ್ರಮಕ್ಕೆ ಭಾಗವಹಿಸಿ ದೇವರ ಪ್ರಸಾದವನ್ನು ಸ್ವೀಕರಿಸಬೇಕಾಗಿ ದತ್ತಾತ್ರೇಯ ದೇವಸ್ಥಾನ ಲೋಕಲ್ ಸ್ಥಾಯಿ ಕಮೀಟಿ, ಲಕ್ಷ್ಮೇಶ್ವರ ಅಂಕೋಲಾ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.