ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸ್ಥಾಯೀ ಸಮಿತಿಯ ರಚನೆಯನ್ನು ಅಧ್ಯಕ್ಷರಾದ ಡಾ,ಜಗದೀಶ್ ಪೈಯವರು ಮಾಡಿದ್ದು.ಈ ಸಮಿತಿಯಲ್ಲಿ ಉತ್ತರಕನ್ನಡ ಜಿಲ್ಲೆಯ ಪರವಾಗಿ ಕೊಂಕಣ ಎಜ್ಯುಕೇಶನ್ ಟ್ರಸ್ಟನ ಶಿಕ್ಷಕ ಚಿದಾನಂದ ಹರಿ ಭಂಡಾರಿ ಅವರ ನೇಮಕಾತಿಯನ್ನು ಮಾಡಲಾಗಿದೆ.
ಉಳಿದಂತೆ ಮಂಗಳೂರಿನ ಗೋಪಾಲಕೃಷ್ಣ ಭಟ್. ಭಟ್ .ಉಡುಪಿಯ ನವೀನ್ ನಾಯಕ.ಬೆಳಗಾವಿಯ ಪ್ರಮೋದ್ ಶೇಟ್ ರನ್ನು ನೇಮಕಮಾಡಲಾಗಿದೆ. ಚಿದಾನಂದ ಭಂಡಾರಿ ಇವರು ಈ ಹಿಂದೆ ಕಾಸರಗೋಡು ಚಿನ್ನಾ ಅವರ ಅಧ್ಯಕ್ಷತೆ ಅವಧಿಯಲ್ಲೂ ಸ್ಥಾಯಿ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದು ಆ ಸಂದರ್ಭದಲ್ಲಿ ಅನೇಕ ಕೊಂಕಣಿ ಭಾಷೆಯ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡುರುವುದು ಅವರಿಗೆ ಇನ್ನೊಂದು ಅವಕಾಶ ದೊರೆಯಲು ಕಾರಣವಾಗಿದೆ.