ಹೊನ್ನಾವರ : ತಾಲೂಕಿನ ಪಟ್ಟಣದ ಬಂದರ ಪ್ರದೇಶದ ಶರವತಿ ನದಿ ತೀರದಲ್ಲಿ ರವಿವಾರ ಮುಂಜಾನೆ ಮಹಿಳೆ ಶವ ಪತ್ತೆಯಾಗಿದ್ದು ಮ್ರತ ಮಹಿಳೆಯನ್ನು ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಮೃತ ಮಹಿಳೆಯನ್ನು ವೀಣಾ ಶಿವಾನಂದ ಪೈ ಎಂದು ಗುರುತಿಸಲಾಗಿದೆ. ಈಕೆ ಮಾನಸಿಕ ಕಾಯಿಲೆ ಬಳಲುತ್ತಿದ್ದರು ಹಾಗೂ ಇತ್ತಿಚೀಗೆ ಕಣ್ಣಿನ ಆಫರೇಶನ್ ಮಾಡಿಕೊಂಡಿದ್ದರು. ಇದನ್ನು ಮನಸ್ಸಿಗೆ ಹಚ್ಚಿಕೊಂಡಿದ್ದರು ಎನ್ನಲಾಗುತ್ತಿದ್ದು ಇದಕ್ಕೇ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಎನ್ನಲಾಗಿದೆ.
ಮರಣೊತ್ತರ ಪರಿಕ್ಷೆ ನಡೆಸಿದ್ದು ಪೋಲಿಸರಿಂದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕೈಂ ಪಿಎಸೈ ಸಾವಿತ್ರಿ ನಾಯಕ ಮತ್ತು ಸಿಬ್ಬಂದಿಗಳು ತನಿಖೆ ಮುಂದುವರೆಸಿದ್ದಾರೆ.