ಭಟ್ಕಳ: ಇದೇ ಬರುವ ದಿನಾಂಕ 11-12-2019ರ ಬುಧವಾರದಂದು ತಿಮ್ಮಯ್ಯ ದಾಸರಿಂದ ಸಂಸ್ಥಾಪಿಸಲ್ಪಟ್ಟಿರುವ ಶ್ರೀ ಶ್ರೀಧರ ಪದ್ಮಾವತಿ ದೇವಿಯ ಸನ್ನಿಧಿಯಲ್ಲಿ ವರ್ಷಂಪ್ರತಿಯಂತೆ ದತ್ತಜಯಂತಿಯ ಅಮಗವಾಗಿ ಶ್ರೀ ಶ್ರಿಧರ ಪದ್ಮಾವತಿ ದೇವಿಯ ರಥೋತ್ಸವವು ನಡೆಯಲಿದೆ. ಅಂದು ಮುಂಜಾನೆ ದೇವತಾ ಪ್ರಾರ್ಥನೆ, ಪುಣ್ಯಾಹ, ಪಂಚಗವ್ಯ ಹವನ, ಸಂಕಲ್ಪ, ಶ್ರೀ ಗುರು ಮಂತ್ರ ಹವನ, ಶ್ರೀ ಸೂಕ್ತ ಹವನ, ಪುರುಷಸೂಕ್ತ ಹವನ ಮಹಾಪೂಜೆ, ದಿಗ್ಬಲಿ, ರಥಬಲಿ, ಶ್ರೀಧರ ಪದ್ಮಾವತಿ ದೇವರ ಶ್ರೀ ಮಚ್ಛಂದನ ರಥೋತ್ಸವ, ಸಾಮೂಹಿಕ ಪ್ರಾರ್ಥನೆ, ತೀರ್ಥ ಪ್ರಸಾದ ವಿತರಣೆ ಅನ್ನಸಂತರ್ಪಣೆಯು ನಡೆಯಲಿದೆ. ಸಾಯಂಕಾಲ 4 ಗಂಟೆಗೆ ಪುರ ಬೀದಿಯಲ್ಲಿ ರಥೋತ್ಸವದ ಮೆರವಣಿಗೆ ನಡೆಯಲಿದೆ. ರಥೋತ್ಸವವು ಸಂಜೆ 4ಗಂಟೆಗೆ ದೇವಾಲಯದಿಂದ ಹೊರಟು ರಘುನಾಥ ರಸ್ತೆಯ ಮಾರ್ಗವಾಗಿ ಪುಷ್ಪಾಂಜಲಿ ಚಿತ್ರಮಂದಿರದ ವರೆಗೆ ತಲುಪಿ ಅಲ್ಲಿಂದ ಹಿಂದಿರುಗಿ ವೀರವಿಠ್ಠಲ ರಸ್ತೆಯ ಮೂಲಕ ನೆಹರು ರಸ್ತೆಯ ಮೂಲಕ ಹೂವಿನ ಚೌಕ ಅಲ್ಲಿಂದ ಮುಖ್ಯ ರಸ್ತೆಯ ಮೂಲಕ ಅರ್ಬನ್ ಬ್ಯಾಂಕವರೆಗೆ ಬಂದು ಅಲ್ಲಿಂದ ಹಿಂದಿರುಗಿ ಕಳಿಹನುಮಂತ ದೇವಸ್ಥಾನದ ಮಾರ್ಗವಾಗಿ ದೇವಾಲಯಕ್ಕೆ ಹಿಂದಿರುಗಲಿದೆ. ಅದರಿಂದ ಸದ್ಭಕ್ತ ಮಹನಿಯರು ಈ ಎಲ್ಲ ದೇವತಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದೇವರ ಪ್ರಸಾದ ಸ್ವೀಕರಿಸಬೇಕಾಗಿ ದೇವಾಲಯದ ಧರ್ಮದರ್ಶಿಗಳು ಕೋರಿದ್ದಾರೆ.