ಕಾರವಾರ: ಬಹು ನಿರೀಕ್ಷಿತ ಯಲ್ಲಾಪುರ ವಿಧಾನಸಭಾ ಉಪಚುನಾವಣೆಯ ಮತದಾನದ ಲೆಕ್ಕಾಚಾರ ಇಂದು ಮುಂಜಾನೆಯಿಂದ ಆರಂಭವಾಗಿದ್ದು ಈ ಕ್ಷೇತ್ರದಿಂದ ಬಿಜೆಪಿ ತನ್ನ ಗೆಲುವು ಸಾಧಿಸಿದೆ.
ಯಲ್ಲಾಪುರ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಿವರಾಮ ಹೆಬ್ಬಾರ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕನಿಗಿಂತ ಮೂವತ್ತು ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಮುನ್ನಡೆ ಸಾಧಿಸಿ ಭರ್ಜರಿ ಜಯಭೇರಿ ಬಾರಿಸಿ ಗೆಲುವಿನ ನಗೆ ಬೀರಿದ್ದಾರೆ.