ಕುಮಟಾ: “ಯಕ್ಷಗಾನ ಕಲೆಯು ಗಣಪತಿಯ ಆರಾಧನೆಯಾಗಿದ್ದು, ಕರಾವಳಿಯ ಗಂಡುಮೆಟ್ಟಿನ ಕಲೆಯಾಗಿದೆ. ಕನ್ನಡ ಭಾಷೆಯನ್ನು ಸಮರ್ಥವಾಗಿ ಬಳಸುವ ಕಲೆ ಯಕ್ಷಗಾನ” ಎಂದು ಬಾರ್ಕೂರು ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಡಾ.ವಿದ್ಯಾವಾಚಸ್ಪತಿ ವಿಶ್ವಸಂತೋಷ ಭಾರತಿ ಶ್ರೀಪಾದರು ನುಡಿದರು.


ಅವರು ಶ್ರೀ ಬ್ರಹ್ಮಜಟಕ ಬಾಲಕಲಾವಿದರ ಯಕ್ಷಗಾನ ಮಂಡಳಿ ಹಾಗೂ ಊರ ನಾಗರಿಕರ ಸಹಯೋಗದಲ್ಲಿ ಹಿರೇಗುತ್ತಿಯ ಲಲಿತ ಮಂಟಪದಲ್ಲಿ ನಡೆದ ಯಕ್ಷಗಾನ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು. “ಸಾಧಕರಿಗೆ ಸನ್ಮಾನಿಸುವುದು ಎಂದರೆ ಅವರಿಗೆ ಸಂದ ಗೌರವಕ್ಕೆ ಕೊಡುವ ಸ್ಫೂರ್ತಿ ಕಾರ್ಯಕ್ರಮ ಸಂಘಟಕರಿಗೆ ಅಭಿನಂದಿಸಿದರು”.


ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಡಾ.ಜಿ.ಎಲ್ ಹೆಗಡೆ ಹಿರಿಯ ಕನ್ನಡ ಉಪನ್ಯಾಸಕರು ಎ.ವಿ ಬಾಳಿಗಾ ಕಾಲೇಜ್ ಕುಮಟಾ ರವರು ಮಾತನಾಡಿ “ಯಕ್ಷಗಾನವು ಅಭಿನಯ ಬಣ್ಣಗಾರಿಕೆ, ಸಂಗೀತ ಸಾಹಿತ್ಯ ನರ್ತನಗಳೆಲ್ಲವನ್ನೂ ಒಳಗೊಂಡ ಶಾಸ್ತ್ರೀಯ ಕಲೆಯಾಗಿದೆ. ಸ್ವಾತಂತ್ರ್ಯ ಪೂರ್ವ ಹೋರಾಟದ ನೆಲ, ವಿಜಯನಗರ ಸಂಸ್ಕøತಿಯ ಮೂಲ ಘಟನೆಯನ್ನು ಶಿಲಾಶಾಸನದ ಸಾಕ್ಷ್ಯ ಹಾಗೂ ಐತಿಹ್ಯದ ಮೂಲಕ ದಾಖಲಿಸಿಕೊಂಡಿದೆ ಹಿರೇಗುತ್ತಿಯ ಊರು ಈ ಊರಿನ ಸಾಧಕರು ತಮ್ಮ ಊರಿನಲ್ಲಿಯೇ ಸನ್ಮಾನಿತರಾಗುವುದು ಅವರ ಜೀವನದಲ್ಲಿ ಅತ್ಯಂತ ಸಂತೋಷದಾಯಕ ಕ್ಷಣವಾಗಿರುತ್ತದೆ” ಎಂದರು.

RELATED ARTICLES  1-9ನೇ ತರಗತಿಗಳಿಗೆ ಪರೀಕ್ಷೆ ಇಲ್ಲ : ಮೌಲ್ಯಾಂಕನ ವಿಶ್ಲೇಷಣಾ ಫಲಿತಾಂಶ


ತಮ್ಮ ತಮ್ಮ ಕಾರ್ಯಕ್ಷೇತ್ರದಲ್ಲಿ ನಿಷ್ಠೆಯಿಂದ ಮುನ್ನಡೆದ ಶ್ರೀ ಎನ್,ಟಿ ಪ್ರಮೋದರಾವ್ ವಿಶ್ರಾಂತ ಎಸ್.ಪಿ ಕರಾವಳಿ ಕಾವಲು ಪಡೆ ಉಡುಪಿ, ಸಂಜೀವÀ ರಾಮಚಂದ್ರ ನಾಯಕ ಶಿಕ್ಷಕರು, ವೆಂಕಟ್ರಾಯ (ಪಮ್ಮು) ಬಿ ನಾಯಕ, ಶ್ರೀಮತಿ ಭಾವನ ವಿನಾಯಕ ನಾಯಕ, ಮನೋಹರ ಲಿಂಗಣ್ಣ ನಾಯಕ, ಡಾ.ಗಿರೀಶ ನಾಯ್ಕ ವೈದ್ಯಾಧಿಕಾರಿಗಳು ಹಿರೇಗುತ್ತಿ ಹಾಸ್ಪಿಟಲ್, ಮಾದೇವ ನಾಯ್ಕ ಹಿರೇಗುತ್ತಿ ಹಾಸ್ಪಿಟಲ್, ಗೋಪಾಲ ಆಚಾರ್ಯ ತೀರ್ಥಹಳ್ಳಿ ಯಕ್ಷಗಾನ ಪಟು, ಶಂಕರ ಭಟ್ಟ್ ಬ್ರಹ್ಮೂರು ಭಾಗವತರು, ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

RELATED ARTICLES  ಘಂಟೆಯ ನಾದ ಇದ್ದಲ್ಲಿ ಮಸೀದಿಯ ಆಜಾನ್ ಮೊಗಳಬಾರದು ; ಶಿವಾನಂದ ಬಡಿಗೇರ


ಸಮಾರಂಭದ ವೇದಿಕೆಯಲ್ಲಿ ಎನ್.ಟಿ.ಪ್ರಮೋದರಾವ್, ಬೀರಣ್ಣ ಮೋನಪ್ಪ ನಾಯಕ ಚುಟುಕು ಕವಿಗಳು, ರಾಜು ಕೇ ಗಾಂವಕರ, ನಾಗರಾಜ ನಾಯಕ ವಕೀಲರು ಕಾರವಾರ, ಆನಂದು ಕವರಿ, ರಾಮು ಕೆಂಚನ್ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ನೆರೆದಿರುವ ಸರ್ವರನ್ನೂ ಬಾಲಕಲಾವಿದರ ಯಕ್ಷಗಾನ ಮಂಡಳಿಯ ಸಂಸ್ಥಾಪಕರಾದ ಪ್ರಶಾಂತ ನಾಯಕ ಬಾಲಕಲಾವಿದರ ಮಂಡಳಿಯ ಧ್ಯೇಯೋದ್ದೇಶಗಳನ್ನು ತಿಳಿಸಿ ಸ್ವಾಗತ ಭಾಷಣ ಮಾಡಿದರು. ಎನ್ ರಾಮು ಹಿರೇಗುತ್ತಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಶಿಕ್ಷಕ ಶೇಖರ ನಾಯ್ಕ ವಂದಿಸಿದರು. ನಂತರ ದಕ್ಷಿಣೋತ್ತರ ಕನ್ನಡದ ನುರಿತ ಕಲಾವಿದರ ಒಗ್ಗುಡೂವಿಕೆಯಲ್ಲಿ ಮಾಗಧ ವಧೆ ಹಾಗೂ ಸುದರ್ಶನ ವಿಜಯ ಎಂಬ ಪೌರಾಣಿಕ ಯಕ್ಷಗಾನ ನಡೆಯಿತು.

ವರದಿ:ಎನ್ ರಾಮು ಹಿರೇಗುತ್ತಿ