ಕುಮಟಾ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಉತ್ತರಕನ್ನಡ ಜಿಲ್ಲಾ ಘಟಕದ ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಪ್ರಾದೇಶಿಕ ವಿಜ್ಞಾನ ಕೇಂದ್ರ ಕಾರವಾರದಲ್ಲಿ ನಡೆದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಹಿರೇಗುತ್ತಿ ಹೈಸ್ಕೂಲ್ ವಿದ್ಯಾರ್ಥಿಗಳು ರಾಜ್ಯ ಮಟ್ಟಕೆ ್ಕಆಯ್ಕೆಯಾಗಿದ್ದಾರೆ.


ವಿಜ್ಞಾನ ಶಿಕ್ಷಕ ಮಹಾದೇವ ಬೊಮ್ಮು ಗೌಡ ಇವರ ಮಾರ್ಗದರ್ಶನದಲ್ಲಿ ಎರಡು ವಿದ್ಯಾರ್ಥಿಗಳ ತಂಡದಲ್ಲಿ ಸನಿದ ಮಂಜುನಾಥ ನಾಯಕ ತಂಡದ ನಾಯಕ. ಹಾಗೂ ರಾಘವೇಂದ್ರ ಟಿ.ಗೌಡ “ಪರಿಸರ ಸ್ನೇಹಿ ಒಲೆ” ಎಂಬ ವೈಜ್ಞಾನಿಕ ಮಾದರಿ ತಯಾರಿಸಿದ್ದು ಸಮಾಜಕ್ಕೆ ಉಪಯೋಗವಾಗಿ ಪರಿಸರಕ್ಕೆ ಆಗುವ ಹಾನಿ ತಪ್ಪಿಸಬಹುದೆಂಬುದನ್ನು ತಿಳಿಸಿದ್ದಾರೆ. ಅದನ್ನು ದಾಖಲಿಸಿ ಮಂಡಿಸಿದ್ದರು. ಹಾಗೂ ಇನ್ನೂ ಎರಡು ವಿದ್ಯಾರ್ಥಿಗಳ ತಂಡದಲ್ಲಿ ನಚಿತ ಸಿ.ಅಂಬಿಗ ತಂಡದ ನಾಯಕ ಹಾಗೂ ಪ್ರೀತಮ್ ಉಮೇಶ ಗಾಂವಕರ “ತಂಬಾಕು ಸೇವನೆ ಮರಣದ ಹಾದಿ” ಎಂಬ ವೈಜ್ಞಾನಿಕ ಪ್ರಬಂಧ ಮಂಡಿಸಿ ದಾಖಲಿಸಿದರು. ಯುವ ಜನತೆ ತಂಬಾಕು ಸೇವನೆಯಿಂದ ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಎರಡು ತಂಡದ ನಾಯಕರು ಮಂಡ್ಯದಲ್ಲ್ಲಿ ನಡೆಯುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

RELATED ARTICLES  ಬಾವಿಗೆ ಬಿದ್ದ ಚಿರತೆಯ ರಕ್ಷಣೆ


ಆಯ್ಕೆಯಾದ ವಿದ್ಯಾರ್ಥಿಗಳಿಗೆ ಹಾಗೂ ಮಾರ್ಗದರ್ಶಕ ಶಿಕ್ಷಕರಿಗೆ ಮಹಾತ್ಮಗಾಂಧೀ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಹೊನ್ನಪ್ಪ ನಾಯಕ, ಕಾರ್ಯದರ್ಶಿ ಮೋಹನ ಕೆರೆಮನೆ, ಸದಸ್ಯರು, ಮುಖ್ಯೋಪಾಧ್ಯಾಯರಾದ ರೋಹಿದಾಸ ಗಾಂವಕರ, ಶ್ರೀ ವಿಶ್ವನಾಥ ಬೇವಿನಕಟ್ಟಿ, ಶ್ರೀ ಬಾಲಚಂದ್ರ ಹೆಗಡೇಕರ, ನಾಗರಾಜ ಜಿ ನಾಯಕ, ಜಾನಕಿ ಗೊಂಡ, ಮಹಾದೇವ ಗೌಡ, ಇಂದಿರಾ ನಾಯಕ, ಶಿಲ್ಪಾ ನಾಯಕ, ಕವಿತಾ ಅಂಬಿಗ ಆಶ್ರಯ ಫೌಂಡೇಶನ್ ಅಧ್ಯಕ್ಷರಾದ ರಾಜೀವ ಗಾಂವಕರ, ಗ್ರಾಮ ಪಂಚಾಯತ ಅಧ್ಯಕ್ಷರಾದ ಸಣ್ಣಪ್ಪ ಮಾರುತಿ ನಾಯಕ, ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ನೀಲಕಂಠ ನಾಯಕ, ಬ್ರಹ್ಮ ಜಟಕ ಯುವಕ ಸಂಘದ ಅಧ್ಯಕ್ಷರು, ಸ್ಪಂದನ ಫೌಂಡೇಶನ್‍ನ ಎನ್. ರಾಮು ಹೀರೆಗುತ್ತಿ, ಊರನಾಗರಿಕರು, ಸಾರ್ವಜನಿಕ ಶಿಕ್ಷಣ ಇಲಾಖೆ ಉತ್ತರ ಕನ್ನಡ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಕುಮಟಾ, ಕೇತ್ರ ಶಿಕ್ಷಣಾಧಿಕಾರಿಗಳು ಕುಮಟಾ ಇವರು ಅಭಿನಂದನೆ ಸಲ್ಲಿಸಿ ಮುಂದಿನ ಹಂತಕ್ಕೆ ಶುಭಹಾರೈಸಿದರು.

RELATED ARTICLES  ಭಟ್ಕಳದಲ್ಲಿ ನಾಪತ್ತೆಯಾಗಿದ್ದ ಮೀನುಗಾರರಲ್ಲಿ ಇಬ್ಬರ ಮೃತದೇಹ ಪತ್ತೆ..!

ವರದಿ: ಎನ್ ರಾಮು ಹಿರೇಗುತ್ತಿ