ಹೊನ್ನಾವರ: ಕರಿಕಾನಮ್ಮ ದೇವಸ್ಥಾನದ ಆಡಳಿತ ಮಂಡಳಿ, ಹೊನ್ನಾವರದ ಕಲಾಮಂಡಲ, ನೀಲಕೋಡದ ಎಸ್​ಕೆಪಿ ಮ್ಯೂಸಿಕ್ ಟ್ರಸ್ಟ್ ಸಹಯೋಗದಲ್ಲಿ ಬೆಳದಿಂಗಳ ಸಂಗೀತೋತ್ಸವ ಮತ್ತು ಪ್ರಶಸ್ತಿ, ಪುರಸ್ಕಾರ ಪ್ರದಾನ ಕಾರ್ಯಕ್ರಮ ಡಿ. 14ರಂದು ಮುಸ್ಸಂಜೆಯಿಂದ ಬೆಳಗ್ಗೆಯ ವರೆಗೆ ತಾಲೂಕಿನ ನೀಲಕೋಡದ ಕರಿಕಾನಮ್ಮನ ಬೆಟ್ಟದಲ್ಲಿ ಏರ್ಪಡಿಸಲಾಗಿದೆ.

ನಾದಮಾಧವ ಪ್ರಶಸ್ತಿಯನ್ನು ಹಿಂದುಸ್ಥಾನಿ ವಾಯೋಲಿನ್ ವಾದಕ ದಂಪತಿ ಪಂ. ಬಿ.ಎಸ್. ಮಠ ಹಾಗೂ ವಿದುಷಿ ಅಕ್ಕಮಹಾದೇವಿ ಮಠ ಅವರಿಗೆ ಪ್ರದಾನ ಮಾಡಲಾಗುವುದು. ವಿದ್ವಾನ್ ಅವಿನಾಶ ಹೆಬ್ಬಾರ ಸಂಸ್ಮರಣ ಯುವ ಪುರಸ್ಕಾರವನ್ನು ಸಾರಂಗಿ ವಾದಕ ಸಫ್ರಾಜ್ ಖಾನ್ ಬೆಂಗಳೂರು, ಗಾಯಕ ವಿನಾಯಕ ಹುಗ್ಗಣ್ಣವರ್ ಮಂಬೈ, ತಬಲಾ ವಾದಕಿ ಕುಮಾರಿ ವಿಜೇತಾ ಹೆಗಡೆ ಅವರಿಗೆ ಪ್ರದಾನ ಮಾಡಲಾಗುವುದು.

RELATED ARTICLES  ರೋಟರಾಕ್ಟ್ ಅಂತರ್ ಜಿಲ್ಲಾ ಡೆಕ್ಸ್ಟೆರಿಯಸ್ ಲೀಗ್' ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಾಧನೆ.

ದೇವಾಲಯದ ಮುಖ್ಯ ಅರ್ಚಕ ಸುಬ್ರಹ್ಮಣ್ಯ ಭಟ್ ಆಶೀರ್ವಚನ ನೀಡುವರು. ಡಾ. ಎಂ.ಜಿ. ಹೆಗಡೆ ಅಧ್ಯಕ್ಷತೆ ವಹಿಸುವರು. ಪಂ. ಬಿ.ಎಸ್.ಮಠ ಮತ್ತು ವಿದೂಷಿ ಅಕ್ಕಮಹಾದೇವಿ ಮಠ ಇವರ ವಾಯೋಲಿನ್ ಜುಗಲ್ಬಂದಿ. ಪಂ. ಕೃಷ್ಣ ಭಟ್ ಮುಂಬೈ, ವಿದುಷಿ ಶಾರದಾ ಭಟ್ ಕಟ್ಟಿಗೆ ಮೈಸೂರು, ಶಿವಾನಂದ ಭಟ್ ಹಡಿನಬಾಳ, ಶ್ರೀಧರ ಹೆಗಡೆ ಕಲ್ಭಾಗ, ಡಾ. ಶಿಲ್ಪಾ ಹೆಗಡೆ ಮೈಸೂರು, ರಾಘವೇಂದ್ರ ಉಪಾಧ್ಯಾಯ ಮೂಡಬಿದ್ರಿ ಅವರ ಹಿಂದುಸ್ಥಾನಿ ಗಾಯನ ಮತ್ತು ಉಸ್ತಾದ್ ರಫಿಕ್ ಖಾನ್ ಮತ್ತು ಉಸ್ತಾದ್ ಶಫಿಕ್ ಖಾನ್ ಅವರ ಸಿತಾರ್ ಜುಗಲ್ಬಂದಿ, ಸಫ್ರಾಜ್ ಖಾನ್ ಮತ್ತು ವಿನಾಯಕ ಹುಗ್ಗಣ್ಣ ಇವರ ಸಾರಂಗಿ ಮತ್ತು ಗಾಯನ ಜುಗಲ್ಬಂದಿ, ಕಿರಣ ಮಗೆಗಾರು ಹಿಂದುಸ್ಥಾನಿ ಬಾನ್ಸುರಿ, ಶ್ರೀನಿಧಿ ಶಿರೂರು ಕರ್ನಾಟಕ ಬಾನ್ಸುರಿ ವಾದನವಿದೆ. ಇವರಿಗೆ ಗೌರೀಶ ಯಾಜಿ ಕೂಜಳ್ಳಿ, ಹರಿಶ್ಚಂದ್ರ ನಾಯ್ಕ ಇಡಗುಂಜಿ, ಭರತ್ ಹೆಗಡೆ ಹೆಬ್ಬಲಸು, ಸತೀಶ ಭಟ್ ಹೆಗ್ಗಾರ ಸಂವಾದಿನಿ ಸಾಥ್ ನೀಡುವರು.

RELATED ARTICLES  ಕುಮಟಾಕ್ಕೆ ಬಿ.ಕೆ ಹರಿಪ್ರಸಾದ್ ಭೇಟಿ.

ಗೋಪಾಲಕೃಷ್ಣ ಹೆಗಡೆ ಕಲ್ಭಾಗ, ಭೀಮಾಶಂಕರ ಬಿದನೂರ್ ಮೈಸೂರು, ಪರಮೇಶ್ವರ ಹೆಗಡೆ ಮೈಸೂರು, ವಿಜೇತಾ ಹೆಗಡೆ ಪುಣೆ, ಮಯಾಂಕ ಬೇಡೇಕರ್ ಗೋವ, ಮಧು ಕುಡಾಲ್ಕಾರ್ ಅಂಕೋಲಾ, ಗಣಪತಿ ಹೆಗಡೆ ಹರಿಕೇರಿ, ಶರತ್ ಹೆಗಡೆ ಬೆಂಗಳೂರು ತಬಲಾ ಸಾಥ್ ನೀಡುವರು. ಖ್ಯಾತ ತಬಲಾ ವಾದಕ ಗೋಪಾಲಕೃಷ್ಣ ಹೆಗಡೆ ಸಂಯೋಜನೆಯಲ್ಲಿ ಕಾರ್ಯಕ್ರಮ ನಡೆಯಲಿದೆ.