ಗೋಕರ್ಣ:- ಪುರಾಣ ಪ್ರಸಿದ್ಧ ಐತಿಹಾಸಿಕ ಕ್ಷೇತ್ರವೆಂದು ಹೆಸರು ಪಡೆದ ಗೋಕರ್ಣದಲ್ಲಿ ಶ್ರೀ ಭದ್ರಕಾಳಿ ದೇವರ ರವಕಿ ಉತ್ಸವದ ನಿಮಿತ್ತ ತಾರಮಕ್ಕಿಯ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ‌ ದೈವಜ್ಞ ಬ್ರಾಹ್ಮಣ ಸಮಾಜದವರಿಂದ ಜಟಗನ ಉಪಾರ, ಮಹಾಪೂಜಾದಿ ದೇವತಾರ್ಚನೆಗಳು ಹಾಗೂ ಅನ್ನ ಸಂತರ್ಪಣಾ ಕಾರ್ಯಕ್ರಮವು ಜರುಗಿತು.

RELATED ARTICLES  ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಕೊಂಕಣದ ಸಿ.ವಿ.ಎಸ್.ಕೆ ವಿದ್ಯಾರ್ಥಿಗಳು


ರಾತ್ರಿ ವೇಳೆಯಲ್ಲಿ ಶ್ರೀ ಭದ್ರಕಾಳಿ ದೇವಿಯ ಪಲ್ಲಕ್ಕಿ ಉತ್ಸವವು ಶ್ರೀ ಸೋಮೇಶ್ವರ ದೇವಾಲಯಕ್ಕೆ ಆಗಮಿಸಿ ದೇವರಿಗೆ ಮಹಾಪೂಜೆ, ಮಂಗಳಾರತಿ, ಪ್ರಸಾದ ವಿತರಣೆಯನ್ನು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸ್ವೀಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು.
ಲೋಕಮಾತೆಯ ಉತ್ಸವಕ್ಕೆ ಮನೆ ಮನೆಯ ಎದುರಿನ ರಸ್ತೆಯಲ್ಲಿ ತರಿಳು ತೋರಣವನ್ನು ಹಾಕಿ ರಂಗೋಲಿ, ದೀಪಗಳನ್ನು ಬೆಳಗಿಸಿ,ಪಟಾಕಿಗಳನ್ನು ಸಿಡಿಸಿ, ತಾಯಿಯ ಉತ್ಸವಕ್ಕೆ ಆರತಿಯನ್ನು ನೀಡಿದ್ದರು.

RELATED ARTICLES  ಬಸ್ ಹಾಗೂ ಲಾರಿ ನಡುವೆ ಅಪಘಾತ : ಇಬ್ಬರಿಗೆ ಪೆಟ್ಟು.

✍? ಪುಷ್ಪಹಾಸ ಬಸ್ತಿಕರ, ಗೋಕರ್ಣ