ಭಟ್ಕಳ: ಶ್ರೀ ತಿಮ್ಮಯ್ಯದಾಸರಿಂದ ಸಂಸ್ಥಾಪಿಸಲ್ಪಟ್ಟ ಭಟ್ಕಳದ ವೀರಮಾತಾ ಶ್ರೀ ಶ್ರೀಧರ ಪದ್ಮಾವತಿ ದೇವಿಯ ರಥೋತ್ಸವವು ಅತ್ಯಂತ ವಿಜೃಂಬಣೆಯಿಂದ ಸಂಪನ್ನಗೊಂಡಿತು. ಪ್ರತಿವರ್ಷ ದತ್ತಜಯಂತಿಯ ಅಂಗವಾಗಿ ನಡೆಯುವ ರಥೋತ್ಸವದ ಅಂಗವಾಗಿ ಶ್ರೀ ದೇವರ ಸನ್ನಿಧಿಯಲ್ಲಿ ಮುಂಜಾನೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಶ್ರೀಧರ ಸ್ವಾಮಿಗಳ ಪಾದುಕಾ ಪೂಜೆ, ನಮಃ ಶಾಂತಾಯ ಹವನ, ಶ್ರೀ ಪದ್ಮಾವತಿ ದೇವಿಗೆ ಫಲಪಂಚಾಮೃತ ಅಭಿಷೇಕ, ಸಹಸ್ರನಾಮಾರ್ಚನೆಯೊಂದಿಗೆ ಕಲ್ಪೋಕ್ತ ಪೂಜೆ ನಡೆಯಿತು. ಮಧ್ಯಾಹ್ನದ ಮಹಾಪೂಜೆಯ ನಂತರ ಅಯ್ಯಪ್ಪ ಸ್ವಾಮಿ ಭಕ್ತಾದಿಗಳಿಗೆ ಹಾಗೂ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ಸಂಜೆ ೪-೩೦ಕ್ಕೆ ಶ್ರೀ ಪದ್ಮಾವತಿ ದೇವಿಯ ಉತ್ಸವ ಮೂರ್ತಿ ಹಾಗೂ ಶ್ರೀಧರ ಸ್ವಾಮಿಗಳ ಪಾದುಕೆಯನ್ನೊಳಗೊಂಡ ರಥವು ದೇವಾಲಯದಿಂದ ಹೊರಟು ರಘುನಾಥ ರಸ್ತೆ ಮಣ್ಕುಳಿಯ ಮಾರ್ಗವಾಗಿ ಪುಷ್ಪಾಂಜಲಿ ಚಿತ್ರಮಂದಿರದ ತನಕ ತಲುಪಿ ಅಲ್ಲಿಂದ ಹಿಂದಿರುಗಿ ವೀರವಿಠಲ ರಸ್ತೆ ಮಾರ್ಗವಾಗಿ ವಡೇರ ಮಠದ ಮೂಲಕ ನಾಡಘರ ದೇವಸ್ಥಾನದ ಮೂಲಕ ನೆಹರು ರಸ್ತೆ, ಹೂವಿನ ಪೇಟೆ ಹಾಗೆ ಮುಖ್ಯರಸ್ತೆಯ ಮೂಲಕ ಮಾರಿಗುಡಿ ಮಾರ್ಗವಾಗಿ ಹಳೆಬಸ್ ನಿಲ್ದಾಣದ ಮೂಲಕ ಅರ್ಬನ್ ಬ್ಯಾಂಕ ಬಳಿ ತಲುಪಿ ಅಲ್ಲಿಂದ ಹಿಂದಿರುಗಿ ಕಳಿ ಹನುಮಂತ ದೇವಸ್ಥಾನದ ಮಾರ್ಗವಾಗಿ ಬಂದು ದೇವಾಲಯವನ್ನು ತಲುಪಿತು.
ರಥೋತ್ಸವದಲ್ಲಿ ಗೋಪಾಲಕೃಷ್ಣ ರಸ್ತೆಯಲ್ಲಿರುವ ಅಯ್ಯಪ್ಪ ಭಜನಾ ಮಂಟಪದ ಅಯ್ಯಪ್ಪ ವೃತಧಾರಿಗಳು ಹಾಗೂ ಆಸರಕೇರಿಯ ಅಖಿಲ ಭಾರತ ಅಯ್ಯಪ್ಪ ಸೇವಾ ಸಂಘದ ಅಯ್ಯಪ್ಪ ವೃತಧಾರಿಗಳು ಹಾಗೂ ನೂರಾರು ರಥೋತ್ಸವದ ಮೆರವಣಿಗೆಯಲ್ಲಿ ಪಾಲ್ಗೊಂಡು ರಥೋತ್ಸವವನ್ನು ಸಂಪನ್ನಗೊಳಿಸಿದರು. ರಥೋತ್ಸವದ ಮೆರವಣಿಗೆಯ ಮಾರ್ಗದುದ್ದಕ್ಕೂ ಭಕ್ತರು ಶ್ರೀ ದೇವರಿಗೆ ಹಣ್ಣುಕಾಯಿ ಸಮರ್ಪಿಸಿ ಕೃತಾರ್ಥರಾದರು. ಜೈ ಮಾರುತಿ ಚಂಡೆ ವಾದ್ಯವು ರಥೋತ್ಸವದ ಮೆರವಣಿಗೆಗೆ ರಂಗನ್ನು ನೀಡಿತು. ರಥೋತ್ಸವದಲ್ಲಿ ಶ್ರೀ ರಾಮ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ,ಶ್ರೀಧರ ನಾಯ್ಕ ಆಸರಕೇರಿ, ಸದಸ್ಯ ವೆಂಕಟೇಶ ನಾಯ್ಕ ತಲಗೋಡ್ , ಕ್ರಿಯಾಶೀಲ ಗೆಳೆಯರ ಬಳಗದ ಅಧ್ಯಕ್ಷ ಭಾಸ್ಕರ ನಾಯ್ಕ , ವೆಂಕಟೇಶ ನಾಯ್ಕ ಆಸರಕೇರಿ, ಗಿರೀಶ ನಾಯ್ಕ ಆಸರಕೇರಿ, ಶ್ರೀಧರ ನಾಯ್ಕ ಆಸರಕೇರಿ, ಗುರುಕೃಪಾ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುರೇಶ ನಾಯ್ಕ, ಪಾಂಡುರಂಗ ಗಜಿನಕರ್ ಮುಂಬಯಿ, ರಾಧಾಕೃಷ್ಣ ಪ್ರಭು ನಾಗಯಕ್ಷೆ ದೇವಸ್ಥಾನ,ಮಹಾದೇವ ಮೊಗೇರ ಅಳ್ವೆಗದ್ದೆ, ನಾಗೇಶ ಮೊಗೇರ ಅಳ್ವೆಗದ್ದೆ, ದುರ್ಗಪ್ಪ ನಾಯ್ಕ ನಾಗವಳ್ಳಿ, ಗುರುಮಠದ ಚೌಥನಿ ಕೂಟದ ಅಧ್ಯಕ್ಷ ವೆಂಕಟೇಶ ನಾಯ್ಕ, ಅನಂತ ವೆಂಕಟೇಶ ಶೇಟ್ ಕಟ್ಟೆವೀರ ಯುವಶಕ್ತಿ ಸಂಘದ ಚಂದ್ರು ನಾಯ್ಕ, ಶೇಷು ನಾಯ್ಕ, ಆನಂದ ನಾಯ್ಕ,ಶ್ರೀಧರ ಎಸ್.ನಾಯ್ಕ, ಎಮ್.ಎಸ್.ನಾಯ್ಕ, ತಿಮ್ಮಪ್ಪ ನಾಯ್ಕ ಮಣ್ಕುಳಿ, ಹಾಗೂ ನೂರಾರು ಭಕ್ತರು ರಥೋತ್ಸವದ ಮೆರವಣಿಗೆಯಲ್ಲಿ ಪಾಲ್ಗೊಂಡರು. ರಥೋತ್ಸವದಲ್ಲಿ ಪಾಲ್ಗೊಂಡ ಎಲ್ಲ ಭಕ್ತಾದಿಗಳಿಗೆ ಹಾಗೂ ಉತ್ಸವಕ್ಕೆ ಸಹಕರಿಸಿದ ಎಲ್ಲ ಭಕ್ತಾದಿಗಳಿಗೆ ದೇವಾಲಯದ ಧರ್ಮದರ್ಶಿಗಳು
ಕೃತಜ್ಞತೆ ಸಲ್ಲಿಸಿದ್ದಾರೆ.