ಶಿರಸಿ : ದಿ ತೋಟಗಾರ್ಸ ಕೋ-ಆಪರೇಟಿವ್ ಸೇಲ್ ಸೊಸೈಟಿಯ ಸುಪರ್ ಮಾರ್ಕೆಟ್‍ನಲ್ಲಿ ಗುರುವಾರದ ಖರೀದಿಯ ಮೇಲೆ ವಿಶೇಷ ರಿಯಾಯಿತಿ ನೀಡುವ ದಿನದಂದು ಜಿಆರ್‍ಬಿ ಉತ್ಪನ್ನಗಳಾದ ಜಾಮೂನ್, ಪುಳಿಯೋಗರೆ, ರಸಂ ಪೌಡರ್, ರವಾ ಇಡ್ಲಿ, ತುಪ್ಪ, ರಸಗುಲ್ಲಾ, ಹಾಗೂ ಬಾದಾಮ್ ಮಿಲ್ಕ ಪೌಡರ್‍ಗಳ ಮೇಲೆ ಹೆಚ್ಚಿನ ರಿಯಾಯಿತಿ ನೀಡಲಾಯಿತು.
ಈ ದಿನದಂದು ಸುಪರ್ ಮಾರ್ಕೆಟ್ ಖರೀದಿಗೆ ಬರುವ ಗ್ರಾಹಕರಿಗೆ ಸವಿಯಲು ಜಿಆರ್‍ಬಿ ಜಾಮೂನ್ ಹಾಗೂ ಪುಳಿಯೋಗರೆಯನ್ನು ಕಂಪನಿಯವರು ಉಚಿತವಾಗಿ ನೀಡಿದರು. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಜಿಆರ್‍ಬಿ ಉತ್ಪನ್ನಗಳನ್ನು ಖರೀದಿ ಮಾಡುವ ಮೂಲಕ ವಿಶೇಷ ರಿಯಾಯಿತಿ ಮಾರಾಟದ ಪ್ರಯೋಜನ ಪಡೆದರು.