ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷಾ ಪ್ರವೇಶಪತ್ರಗಳ ಚೆಕ್‍ಲೀಸ್ಟಿನ ಪರಿಶೀಲನೆಯ ಅವಧಿಯನ್ನು ಇದೇ ದಿ: 13-12-2019 ರಂದು ನಿಗದಿಪಡಿಸಿದ್ದನ್ನು ಹೆಚ್ಚಿಗೆ 3 ದಿನಗಳ ಕಾಲ ಮುಂದೂಡಲು ನಿರ್ದೇಶಕರು ಪದವಿಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು ಇವರು ಒಪ್ಪಿಕೊಂಡಿದ್ದಾರೆಂದು ವಿಧಾನ ಪರಿಷತ್ ಸದಸ್ಯ ಎಸ್.ವ್ಹಿ. ಸಂಕನೂರ ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿರುವ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರುಗಳು ಬರುವ ಮಾರ್ಚ-2020 ರಲ್ಲಿ ಜರುಗುವ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಪ್ರವೇಶ ಪತ್ರಗಳ ಚೆಕ್‍ಲೀಸ್ಟನಲ್ಲಿ ಏನಾದರೂ ಲೋಪದೋಷಗಳು ಇದ್ದರೆ ಎಸ್.ಎಸ್.ಎಲ್.ಸಿ ಮೂಲ ಅಂಕಪಟ್ಟಿ ಪ್ರತಿಗಳೊಂದಿಗೆ ಪದವಿಪೂರ್ವ ಇಲಾಖೆಯ ಕಚೇರಿಗೆ ಖುದ್ದಾಗಿ ತೆಗೆದುಕೊಂಡು ಬಂದು ಸರಿಪಡಿಸಿಕೊಳ್ಳಲು ಇದೇ ದಿ: 13-12-2019 ರವರೆಗೆ ಗಡುವು ನೀಡಲಾಗಿತ್ತು. ಈ ಸೂಚನೆಯಂತೆ ತಿದ್ದುಪಡಿ ಮಾಡಿಕೊಳ್ಳಲು ಕೊಟ್ಟ ಕಾಲಾವಕಾಶ ಅತ್ಯಂತ ಕಡಿಮೆ ಇದ್ದುದರಿಂದ ಎಲ್ಲ ಪ್ರಾಂಶುಪಾಲರು, ವಿದ್ಯಾರ್ಥಿಗಳು ಹಾಗೂ ಪಾಲಕರು ಆತಂತಕಕ್ಕೆ ಒಳಗಾಗಿದ್ದರು. ಈ ಹಿನ್ನಲೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಸ್.ವ್ಹಿ. ಸಂಕನೂರ ಅವರು ದೂರವಾಣಿ ಮೂಲಕ ಪದವಿಪೂರ್ವ ಇಲಾಖೆಯ ನಿರ್ದೇಶಕರೊಂದಿಗೆ ಮಾತನಾಡಿ ಸಮಸ್ಯೆಯ ಬಗ್ಗೆ ವಿವರಣೆ ನೀಡಿ ಚೆಕ್‍ಲೀಸ್ಟ ಪರಿಶೀಲನಾ ಅವಧಿಯನ್ನು ಇನ್ನೂ ಕನಿಷ್ಟ 3-4 ದಿನಗಳವರೆಗೆ ವಿಸ್ತರಿಸುವಂತೆ ಒತ್ತಾಯಿಸಿದ್ದಕ್ಕಾಗಿ ಸಕಾರಾತ್ಮಕವಾಗಿ ಸ್ಪಂದಿಸಿ ಅವಧಿ ವಿಸ್ತರಣೆಗೆ ಒಪ್ಪಿಕೊಂಡಿರುವರು. ಹಾಗಾಗಿ ಪ್ರಾಂಶುಪಾಲರು, ಪಾಲಕರು ವಿದ್ಯಾರ್ಥಿಗಳು ಆತಂತಕ್ಕೆ ಒಳಗಾಗಬಾರದೆಂದು ಸಂಕನೂರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಯಕ್ಷಗಾನ ನಾಡಿನ ಸಂಸ್ಕøತಿಯ ಪ್ರತೀಕ - ಎಮ್. ಎ. ಹೆಗಡೆ