ದಿನಾಂಕ 18/8/17 ರಂದು ತೊರ್ಕೆ ಗ್ರಾಮ ಪಂಚಾಯತ ವ್ಯಾಪ್ತಿಯ ಹಿತ್ತಲಮಕ್ಕಿ ಗ್ರಾಮದಲ್ಲಿ ಅರ್ಹ ಫಲಾನುಭವಿಗಳಿಗೆ ಕೇಂದ್ರ ಸರಕಾರದ ಉಜ್ವಲ ಯೋಜನೆಯಡಿಯಲ್ಲಿ ಎಲ್.ಪಿ.ಜಿ. ಗ್ಯಾಸ್ ಸಿಲಿಂಡರ, ರೆಗ್ಯುಲೇಟರ ಹಾಗೂ ಸ್ಟೌಗಳನ್ನು ವಿತರಿಸಲಾಯಿತು.
ತಾಯಂದಿರ ಸ್ವಾಸ್ಥ್ಯ ಮತ್ತು ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಕೇಂದ್ರ ಸರಕಾರ ಜಾರಿಗೊಳಿಸಿದ ಉಜ್ವಲ ಯೋಜನೆಯ ಮಾಹಿತಿ ಅರಿಯದ ಮುಗ್ಧ ಗ್ರಾಮೀಣ ಪ್ರದೇಶದ ಜನರು ಸಮಯ ಹಾಗೂ ಹಣ ವ್ಯಯಿಸದೇ ಅವರ ಮನೆಬಾಗಿಲಿಗೆ ಈ ಯೋಜನೆಯನ್ನು ತಲುಪಿಸಿ ಅನುಕೂಲತೆಯನ್ನು ಒದಗಿಸುವ ನಿಟ್ಟಿನಲ್ಲಿ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆ ಹಾಗೂ ಟ್ರಸ್ಟ್ ನ ಸಿಬ್ಬಂದಿಗಳು ಸಹಕರಿಸಿದ್ದು ತಮ್ಮ ಟ್ರಸ್ಟ್ ನಿಂದಲೇ ಎಲ್ಲಾ ಫಲಾನುಭವಿಗಳಿಗೆ ಲೈಟರಗಳನ್ನು ಸಹ ಉಚಿತವಾಗಿ ಒದಗಿಸುತ್ತಿದ್ದಾರೆ.
ಮೋಹಿನಿ ನಾಯ್ಕ, ಶ್ರೀಮತಿ ಗುನಗ, ಯಮುನಾ ಗುನಗ, ತಿಮ್ಮಕ್ಕ ಪಟಗಾರ, ಮಂಕಾಳಿ ನಾಯಕ, ನೇತ್ರಾವತಿ ಪಟಗಾರ, ಮಾದೇವಿ ಪಟಗಾರ, ಭಾಗೀರತಿ ಗೌಡ, ಇಂದಿರಾ ಪಟಗಾರ ಮುಂತಾದ ಫಲಾನುಭವಿಗಳು ಈ ಯೋಜನೆಯಡಿ ಎಲ್.ಪಿ.ಜಿ. ಗ್ಯಾಸ ಸಂಪರ್ಕ ಪಡೆದುಕೊಂಡು ಕೇಂದ್ರ ಸರಕಾರದ ಜನಪರ ಕಾರ್ಯವನ್ನು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಸಹಕಾರವನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಕಾರ್ಯದರ್ಶಿ ಅರುಣ ಕವರಿ, ಪುರೋಹಿತರಾದ ಬಾಲಚಂದ್ರ ಭಟ್, ಶಿವ ಭಟ್, ಉದ್ಯಮಿ ರಮಾಕಾಂತ ಕಾಮತ, ರಾಮನಾಥ ಕಾಮತ, ಮಾಣೇಶ್ವರ ಪಟಗಾರ, ವೆಂಕಟ್ರಮಣ ಕವರಿ, ತಿಮ್ಮಣ್ಣ ನಾಯಕ ಹಾಗೂ ಶ್ರೀನಿವಾಸ ನಾಯಕ ಮುಂತಾದವರು ಉಪಸ್ಥಿತರಿದ್ದರು.

RELATED ARTICLES  ಉತ್ತರ ಕನ್ನಡದಲ್ಲಿಂದು 72 ಕೊರೋನಾ : ಕುಮಟಾದಲ್ಲಿಯೇ ನಾಲ್ಕು ಸಾವು