ಕುಮಟಾ: ಜನತಾ ವಿದ್ಯಾಲಯ ಮಿರ್ಜಾನ ಶಾಲೆಯಲ್ಲಿ ಭಗವದ್ಗೀತಾ ಅಭಿಯಾನ ಗೀತಾಜಯಂತಿ ಕಾರ್ಯಕ್ರಮ ನಡೆಯಿತು.
ಉದ್ಘಾಟನೆ ಮಾಡಿದ ರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆಯ ಜಿಲ್ಲಾ ಪ್ರಚಾರಕರಾದ ನಾಗೇಂದ್ರರವರು “ಭಗವದ್ಗೀತೆಯಿಂದ ಮನಸ್ಸಿಗೆ ಶಾಂತಿ ನೆಮ್ಮದಿ ನೀಡುವುದರ ಜೊತೆಗೆ ಭಕ್ತಿ ಮುಕಿ”್ತ ಕುರಿತು ಮಾತನಾಡಿದರು. ಶಾಲೆಯ ಮುಖ್ಯೋಪಾದ್ಯಾಯರಾದ ಬಿ ಲಕ್ಷ್ಮಣ ಅಧ್ಯಕ್ಷತೆ ವಹಿಸಿದ್ದರು.
ಪ್ರಾಸ್ತಾವಿಕ ಮಾತನಾಡುತ್ತ ಪ್ರೇಮಾ ಶೆಟ್ಟಿಯವರು ಎಲ್ಲರನ್ನು ಪರಿಚಯಿಸಿದರು. ಸಂಸ್ಕøತ ಶಿಕ್ಷಕರಾದ ರಾಜು ರಾಮ ನಾಯ್ಕ್ ಕಾರ್ಯಕ್ರಮ ಸಂಘಟಿಸಿದರು. ಕುಮಾರಿ ನಾಗಶ್ರೀ ಮಡಿವಾಳ ನಿರೂಪಿಸಿದರು. ಮನೋಜ್ ಪಿ ಭಟ್ ವಂದಿಸಿದರು. ಕುಮಾರಿ ಪ್ರತಿಕ್ಷಾ ಹಾಗೂ ಶ್ರದ್ಧಾ ಬಹುಮಾನ ಯಾದಿ ವಾಚಿಸಿದರು. ಎಲ್ಲ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು.
ವರದಿ: ಎನ್ ರಾಮು ಹಿರೇಗುತ್ತಿ