ಕುಮಟಾ: ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯ ಹಾಗೂ ಅಭಿನವ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಹಿರಿಯ ಸಾಹಿತಿ ಡಾ.ಕೆ.ವಿ.ತಿರುಮಲೇಶ್ ಅವರ ಸಾಹಿತ್ಯಾವಲೋಕನವ ಕಮಲಾ ಬಾಳಿಗಾ ಕಾಲೇಜಿನ ಸಭಾಭವನದಲ್ಲಿ ನಡೆಯಿತು. ಕಥೆಗಾರ ಡಾ. ಶ್ರೀಧರ ಬಳಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ, ಚರಿತ್ರೆಯಲ್ಲಿ ದಾಖಲಾಗದಿರುವ, ಕವಲು ಮಾರ್ಗದಲ್ಲಿ ಕ್ರಮಿಸುತ್ತಿರವ, ಧ್ವನಿ ಎತ್ತಲಾರದವರಿಗೆ ಧ್ವನಿವರ್ಧಕವಾಗಬೇಕೆಂದು ಪ್ರತಿಪಾದಿಸಿದ ತಿರುಮಲೇಶ್ ಕನ್ನಡ ನಾಡು ಕಂಡಿರುವ ಅಕ್ಷರ ಲೋಕದ ಅಪರೂಪದ ಹಾಗೂ ವಿದ್ವತ್ ಪೂರ್ಣ ಪ್ರತಿಭೆ ಎಂದು ಬಣ್ಣಿಸಿದರು.
ಅತಿಥಿಗಳಾಗಿ ಆಗಮಿಸಿದ ಬೆಂಗಳೂರಿನ ಅಭಿನವದ ನ. ರವಿಕುಮಾರ ನ.ರವಿಕುಮಾರ ತಿರುಮಲೇಶರ ಕೃತಿ ಪ್ರಕಟಣೆಗೆ ಮುಂಚೂಣಿಯಲ್ಲಿ ನಿಂತ ತಮಗೆ ಅಪಾರ ಸಂತಸವನ್ನು ನೀಡುತ್ತಿದೆ ಎಂದರು. ಪ್ರೊ.ಟಿ.ಜಿ.ಭಟ್ಟ ಹಾಸಣಗಿ ಅವರು ಆಶಯ ನುಡಿಗಳನ್ನಾಡಿದರು. ಕಾವ್ಯ ಸಾಹಿತ್ಯದ ಮೊದಲ ಗೋಷ್ಠಿಯಲ್ಲಿ ತಿರುಮಲೇಶ್‍ರ ಆರಂಭಿಕ ಕಾವ್ಯದ ಕುರಿತು ಬಾಳಿಗಾ ಪಿಯು ಕಾಲೇಜಿನ ಉಪನ್ಯಾಸಕ ಗಿರೀಶ್ ನಾಯ್ಕ ವನ್ನಳ್ಳಿ ಮಾತನಾಡಿದರೆ, ಅಕ್ಷಯ ಕಾವ್ಯದ ಕುರಿತು ಸಾಹಿತಿ ಚಿನ್ಮಯ ಹೆಗಡೆ ಪ್ರಬಂಧ ಮಂಡಿಸಿದರು. ತದನಂತರ ನಡೆದ ಗದ್ಯ ಸಾಹಿತ್ಯ ಗೋಷ್ಠಿಯಲ್ಲಿ ತಿರುಮಲೇಶರ ಕಥೆಗಳ ಕುರಿತು ಪ್ರತಿಭಾ ಭಾಗ್ವತ ಹಾಗೂ ಅವರ ಅಂಕಣ ಬರಹಗಳ ಕುರಿತು ಎನ್.ಆರ್.ಗಜು ಮಾತನಾಡಿದರು. ಹಿರಿಯ ಕವಿ ಬೀರಣ್ಣ ನಾಯಕ, ಕರ್ನಾಟಕ ಬ್ಯಾಂಕ್, ನವಿಲಗೋಣಿನ ಜಿ.ಎಲ್.ಹೆಗಡೆ, ಕೂಜಳ್ಳಿಯ ಕೃಷ್ಣಾನಂದ ಭಟ್ಟ, ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಲಿಪಿ ಭಂಡಾರಿ, ಹೇಮಲತಾ ಹೆಗಡೆ, ಮೇಘನಾ ನಾಯ್ಕ, ಅರ್ಪಿತಾ ಭಟ್ಟ, ಸೀಮಾ ಹೆಗಡೆ, ವೆಂಕಟ್ರಮಣ ಹೆಗಡೆ ಇವರು ತಿರುಮಲೇಶರ ಕವಿತೆಗಳನ್ನು ವಾಚಿಸಿದರು.
ಸಂಘಟಕರಲ್ಲೊಬ್ಬರಾದ ಚಂದ್ರಶೇಖರ ಉಪಾಧ್ಯಾಯ ಸ್ವಾಗತಿಸಿ ಪರಿಚಯಿಸಿದರು. ಶಿಕ್ಷಕ ವಿದ್ಯಾರ್ಥಿನಿ ಮಂಜುಳಾ ಭಟ್ ನಿರೂಪಿಸಿದರು. ಉಪನ್ಯಾಸಕ ಸುಬ್ರಹ್ಮಣ್ಯ ಭಟ್ ವಂದಿಸಿದರು.