ಉತ್ತರಕನ್ನಡ ಜಿಲ್ಲೆಯ ರಾಷ್ಟಿಯ ಹೆದ್ದಾರಿಯಲ್ಲಿ ಸ್ಥಾಪನೆ ಆಗಿರುವ ಟೋಲ್ ಗೇಟ್ ನಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವಂತಾಗಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಅಂಕೋಲಾ ತಾಲೂಕಿನ ಬೆಲೆಕೇರಿ ಟೋಲ್ ಗೇಟ್ ಎದುರು ಕರವೇ ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ ಮುಂದಾಳತ್ವದಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವಂತಾಗಬೇಕೆಂದು ಕರವೇ ಕಾರ್ಯತರು ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಕರವೆ ಜಿಲ್ಲಾ ಅಧ್ಯಕ್ಷ ಭಾಸ್ಕರ ಪಟಗಾರ ಮಾತನಾಡಿ ಉತ್ತರಕನ್ನಡ ಕನ್ನಡ ಜಿಲ್ಲೆಯ ಜನ ಈಗಾಗಲೆ ಸಾಕಷ್ಟು ಯೋಜನೆಗಳಿಗಾಗಿ ಭೂಮಿ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಆದರೆ ಇನ್ನೂ ಮುಂದೆ ಸುಮ್ಮನಿರಲು ಸಾಧ್ಯವಿಲ್ಲ. ಸದ್ಯದಲ್ಲಿ ಆರಂಭವಾಗಲಿರುವ ಟೋಲ್ ಗೇಟ್ ಗಳಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ನೀಡುವಂತಾಗಬೇಕು. ಇಲ್ಲವಾದಲ್ಲಿ ಕರವೇ ಸಂಘಟನೆಯಿಂದ ಉಗ್ರ ಹೋರಾಟ ಮಾಡುವುದುದಾಗಿ ಎಚ್ಚರಿಸಿದ್ದಾರೆ.
ಸದ್ಯದಲ್ಲೆ ಚತುಷ್ಪಥ ಹೆದ್ದಾರಿಯಲ್ಲಿ ಟೋಲ್ ಗೇಟ್ ಆರಂಭಿಸಿವ ಮೂಲಕ ವಾಹನ ಸವಾರರಿಂದ ಸುಂಕ ವಸುಲಿ ಮಾಡಲಾಗುವುದು. ಐ ಆರ್ ಬಿ ಕಂಪನಿ ಹೆದ್ದಾರಿ ನಿರ್ಮಾಣಕ್ಕಾಗಿ ಜಿಲ್ಲೆಯ ಕರಾವಳಿ ಭಾಗದಲ್ಲಿ ನೂರಾರು ಜನ ತಮ್ಮ ಜಮೀನು ನೀಡಿದ್ದಾರೆ ಎಂದು ಅವರು ವಿಷಾದಿಸಿದರು.