ಕುಮಟಾ : ತಾಲೂಕಿನ ಮೂರೂರು ಹುಳ್ಸೆಮಕ್ಕಿಯ ಶಿಕ್ಷಕಿ ಕುಸುಮಾ ಹೆಗಡೆಯವರ ಮನೆಯಲ್ಲಿ ಕಳುವಿನ ಪ್ರಕರಣ ನಡೆದಿದ್ದು ಸುಮಾರು ೨ ಲಕ್ಷರೂ ಮೌಲ್ಯದ ಚಿನ್ನಾಭರಣ ಹಾಗೂ ೨೦,೦೦೦ ರೂ ನಗದು ಕಳುವಾಗಿದೆ. ಡಿ. ೧೫ ಹಾಗೂ ೧೬ ರಂದು ಮನೆಗೆ ಬೀಗ ಹಾಕಿ ಬೇರೆಡೆ ತೆರಳಿದ್ದ ವೇಳೆ ಮುಂಬಾಗಿಲ ಬೀಗ ಮುರಿದು ಕಳುವು ಮಾಡಲಾಗಿದೆ.
ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪೋಲೀಸರು ತನಿಖೆ ಕೈಗೊಂಡಿದ್ದಾರೆ.