ಕುಮಟಾ: ಇಲ್ಲಿಯ ರಾಮನಾಥ ಪ್ರೌಢಶಾಲೆ ಊರಕೇರಿಯ ಪ್ರೌಢಶಾಲೆಯಲ್ಲಿ ಮಕ್ಕಳ ಸಂತೆ ಅದ್ಧೂರಿಯಾಗಿ ನೆರವೇರಿತು.

ಸಂತೆ ಉದ್ಘಾಟಿಸಿದ ಆಡಳಿತ ಮಂಡಳಿ ಸದಸ್ಯ ಆರ್.ಎಂ.ನಾಯ್ಕ ಸಂತೆಯ ಪರಿಕಲ್ಪನೆ ಮಕ್ಕಳಲ್ಲಿ ಒಡಮೂಡಲು ಇದು ಸಹಕಾರಿಯಾಗುತ್ತದೆಂದರು.

RELATED ARTICLES  ಹಿಂಬದಿಯಿಂದ ಬಂದ ಬೈಕ್ ಕಾರಿಗೆ ಗುದ್ದಿ ಅಪಘಾತ


ಮುಖ್ಯಾಧ್ಯಾಪಕ ಎಸ್.ಜಿ.ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಎಲ್ಲ ಶಿಕ್ಷಕ ಸಿಬ್ಬಂದಿಗಳು, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.


ಸಂತೆ ಮಾರುಕಟ್ಟೆಯಲ್ಲಿ ಸಿಗುವ ಎಲ್ಲ ರೀತಿಯ ತರಕಾರಿ, ಹಣ್ಣು ಹಂಪಲುಗಳ ಜೊತೆಗೆ ಮನೆಯಲ್ಲಿಯೇ ತಯಾರಿಸಿದ ಎಲ್ಲ ತಿಂಡಿಗಳನ್ನು ಇಡಲಾಗಿತ್ತು.

RELATED ARTICLES  ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ.

ಊರನವರೆಲ್ಲಾ ಸಂತೆಯಲ್ಲಿ ವ್ಯವಹರಿಸುವ ಮೂಲಕ ಮಕ್ಕಳಿಗೆ ಪ್ರೋತ್ಸಾಹಿಸಿದರು.