ಸಿದ್ದಾಪುರದ ಬೀಳಗಿ ಗ್ರಾಮದಲ್ಲಿ 11 ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಶಿರಸಿ : ಸಿದ್ದಾಪುರದ ಬೀಳಗಿ ಗ್ರಾಮದಲ್ಲಿ 11 ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಸಿದ್ದಾಪುರದ ಮಂಜುನಾಥ ಗೌಡ, ಮಂಜು ನೀರಾ ಗೌಡ ಹಾಗೂ ಹಾನಗಲ್ಲಿನ ಚನ್ನಬಸಪ್ಪ ಚಂದ್ರಶೇಖರ ಗುಜ್ಜಣ್ಣನವರ್, ಮಹಮ್ಮದ್ ಗೌಸ್ ಸಲೀಮ್ ಪಾಶಾ ಬಂಧಿತ ಆರೋಪಿಗಳು. ಅಕ್ರಮವಾಗಿ ಜಾನುವಾರುಗಲನ್ನು ಸಾಗಿಸುತ್ತಿರುವುದಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು ಆರೊಪಿಗಳನ್ನು ಥಳಿಸಿದ್ದಾರೆ.
ಹೊನ್ನಾವರದಿಂದ ಹಾನಗಲ್ಲಿನ ಕಸಾಯಿಖಾನೆಗಾಗಿ ಅಕ್ರಮವಾಗಿ ಗೋವುಗಳನ್ನು ಸಾಗಿಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.
ಈ ಕುರಿತು ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.