ಕುಮಟಾ: ಜೆಡಿಎಸ್ ಯುವ ಮುಖಂಡ ಮತ್ತು ಜನಪರ ಹೋರಾಟಗಾರ ಸೂರಜ ನಾಯ್ಕ ಸೋನಿ ಅವರ ಹುಟ್ಟು ಹಬ್ಬವನ್ನು ಅವರ ಅಭಿಮಾನಿಗಳ ಬಳಗವು ಕುಮಟಾ ತಾಲೂಕು ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣುಹಂಪಲು ವಿತರಿಸುವ ಮೂಲಕ ಬಹಳ ಅರ್ಥಪೂರ್ಣವಾಗಿ ಆಚರಿಸಿತು.

ಸಾಮಾಜಿಕ ಚಿಂತಕ, ಜನಪರ ಹೋರಾಟಗಾರ ಮತ್ತು ಜೆಡಿಎಸ್ ಯುವ ಮುಖಂಡ ಸೂರಜ ನಾಯ್ಕ ಸೋನಿ ಅವರ ಹುಟ್ಟು ಹಬ್ಬವನ್ನು ಸೂರಜ ನಾಯ್ಕ ಸೋನಿ ಅಭಿಮಾನಿಗಳ ಬಳಗವು ಬಲೂ ವಿಶೇಷವಾಗಿ ಆಚರಿಸಿತು. ಕುಮಟಾ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಜಮಾಯಿಸಿದ ಸೂರಜ ನಾಯ್ಕ ಸೋನಿ ಅಭಿಮಾನಿಗಳ ಬಳಗದ ಸದಸ್ಯರು ರೋಗಿಗಳಿಗೆ ಬ್ರೆಡ್, ಹಣ್ಣುಹಂಪಲುಗಳನ್ನು ವಿತರಿಸುವ ಮೂಲಕ ಸೂರಜ ನಾಯ್ಕ ಸೋನಿ ಅವರ ಆಯುಷ್ಯ , ಆರೋಗ್ಯ ವೃದ್ಧಿಯಾಗಲೆಂದು ಶುಭ ಹಾರೈಸಿದರು.
ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಗಣೇಶ ಮತ್ತು ಡಾ. ಶ್ರೀನಿವಾಸ ನಾಯಕ ತಮ್ಮ ಅಭಿಪ್ರಾಯ ಹಂಚಿಕೊಂಡರು

RELATED ARTICLES  ಸ್ವರ್ಗಸಂವಾದ - ರಾಮಪದ - ರಜತ ಮಂಟಪದಿ ಶ್ರೀಕರಾರ್ಚಿತ ಪೂಜೆ : ಇದೀಗ ರಾಜ್ಯ ರಾಜಧಾನಿಯಲ್ಲಿ ಸ್ವರ್ಗದ ಕಂಪು‌.

ಜೆಡಿಎಸ್ ಮುಖಂಡ ಸೂರಜ ನಾಯ್ಕ ಸೋನಿ ಅವರು ತಮ್ಮ ಕುಟುಂಬದೊಂದಿಗೆ ಕುಮಟಾ ತಾಲೂಕಿನ ಅಳ್ವೆಕೋಡಿಯ ದಯಾನಿಲಯ ಬುದ್ದಿಮಾಂದ್ಯ ವಿಶೇಷ ಮಕ್ಕಳ ಶಾಲೆಗೆ ತೆರಳಿ, ಆ ವಿಶೇಷ ಮಕ್ಕಳೊಂದಿಗೆ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವ ಮೂಲಕ ಸಂಭ್ರಮಿಸಿದರು. ಕೆಕ್ ಕತ್ತರಿಸಿ, ಸಿಹಿ ವಿತರಿಸಲಾಯಿತು. ಅಲ್ಲದೆ ವಿಶೇಷ ಅಗತ್ಯವುಳ್ಳ ಮಕ್ಕಳೊಂದಿಗೆ ಊಟ ಮಾಡುವ ಮೂಲಕ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು.
ಈ ಸಂದರ್ಭದಲ್ಲಿ ಸೂರಜ ನಾಯ್ಕ ಸೋನಿ ಅಭಿಮಾನಿಗಳ ಬಳಗದ ನೂರಕ್ಕೂ ಅಧಿಕ ಸದಸ್ಯರು ಇದ್ದರು.

RELATED ARTICLES  ಕುಮಟಾ ಮಹಾತ್ಮಾಗಾಂಧಿ ಪ್ರೌಢಶಾಲೆಯಲ್ಲಿ "ಹದಿಹರಯದ ತಲ್ಲಣ ಖಿನ್ನತೆಗೆ ದಾರಿಯಾಗದಿರಲಿ" ವಿಶೇಷ ಉಪನ್ಯಾಸ ಕಾರ್ಯಕ್ರಮ