ಭಟ್ಕಳ : ಪ್ರಾರ್ಥನಾ ಪ್ರತಿಷ್ಠಾನ ಭಟ್ಕಳ, ದುರ್ಗಾಂಬಿಕಾ ಯುವಕ ಸಂಘ ತಟ್ಟಿಹಕ್ಕಲ್, ಶಿರಾಲಿ ಹಾಗೂ ಆನಂದಾಶ್ರಮ ಸಂಯುಕ್ತ ಪದವಿ ಪೂರ್ವ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಉತ್ತರಕನ್ನಡ ಜಿಲ್ಲೆಯ ಪದವಿ ಪೂರ್ವ ಮತ್ತು ಪದವಿ ಉಪನ್ಯಾಸಕರುಗಳಿಗೆ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯು ಡಿಸೆಂಬರ್ 22ರ ರವಿವಾರದಂದು ಆನಂದಾಶ್ರಮ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ.

RELATED ARTICLES  ಮುಂದಿನ ಒಂದು ವಾರ ಚಳಿ..!

ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ಹಾಗೂ ತೃತೀಯ ಬಹುಮಾನವು ಅನುಕ್ರಮವಾಗಿ 10000/-, 6000/- ಮತ್ತು 4000/-ನಗದು ಬಹುಮಾನದೊಂದಿಗೆ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಕಾರ್ಯಕ್ರಮವು ಮುಂಜಾನೆ 9.30ಕ್ಕೆ ಉದ್ಘಾಟನೆಗೊಳ್ಳಲಿದ್ದು 10 ಗಂಟೆಗೆ ರಸಪ್ರಶ್ನೆ ಸ್ಪರ್ಧೆಯು ಪ್ರಾರಂಭವಾಗಲಿದೆ.

RELATED ARTICLES  BROWN WOOD SHOWROOM ನಾಳೆಯಿಂದ ಪ್ರಾರಂಭ.

ಈ ಸ್ಪರ್ಧೆಯಲ್ಲಿ ಪ್ರತಿ ಕಾಲೇಜಿನಿಂದ ಎರಡೆರಡು ಉಪನ್ಯಾಸಕರ ತಂಡವು ಭಾಗವಹಿಸಲಿದ್ದು ಈಗಾಗಲೇ ಜಿಲ್ಲೆಯಿಂದ 17 ತಂಡಗಳು ಹೆಸರನ್ನು ನೊಂದಾಯಿಸಿಕೊಂಡಿವೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.