ಕಾರವಾರ : ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ನಂತರ ಪರ-ವಿರೋದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಉತ್ತರಕನ್ನಡ ಜಿಲ್ಲಾದ್ಯಂತ ಡಿ.19 ಇಂದಿನಿಂದ ಡಿ.21ರ ನಾಡಿದ್ದು ತಡರಾತ್ರಿ 12 ವರೆಗೆ ಜಿಲ್ಲೆಯಲ್ಲಿ ಕಲಂ 144 ಜಾರಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಅವರು ಆದೇಶಿಸಿದ್ದಾರೆ.
ನಿಷೇಧಾಜ್ಞೆ ಶಾಲಾ-ಕಾಲೇಜುಗಳ ಕಾರ್ಯನಿರ್ವಹಿಸಲಿದೆ. ಪೌರತ್ವ ಕಾಯ್ದೆ ವಿಚಾರವಾಗಿ ಬೀದಿಗಿಳಿದು ಪ್ರತಿಭಟಿಸುವವರಿಗೆ ಮಾತ್ರವಷ್ಟೆ ನಿರ್ಬಂಧಿಸಲಾಗುವುದು ತಿಳಿಸಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲಾದ್ಯಂತ ಸೆಕ್ಷನ್ 144 ರಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ನಿಷೇಧಾಜ್ಞೆ ಆದೇಶ ಉಲ್ಲಂಘಿಸಿದ್ದರೆ ಅಂತವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ನಾಗರಿಕರ ನೆಮ್ಮದಿಗೆ ಧಕ್ಕೆ ತರುವಂತಹ ಘಟನೆಗಳನ್ನು ತಡೆಗಟ್ಟುವ ಉದ್ದೇಶದಿಂದ ನಿಷೇಧಾಜ್ಞೆ ಹೊರಡಿಸಲಾಗಿದೆ.ಈ ಹಿಂದೆ ಪ್ರತಿಭಟನೆ, ವೇಳೆ ಜಿಲ್ಲೆಯಲ್ಲಿ ಸಾರ್ವಜನಿಕರ ಆಸ್ತಿ-ಪಾಸ್ತಿಗೆ ನಷ್ಟ ಉಂಟಾಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅಮಾಯಕರಿಗೆ, ಪೊಲೀಸರ ಹಲ್ಲೆ ಆಗಿದ್ದು, ಲಾಠಿ ಚಾರ್ಜ್, ಕರ್ಫ್ಯೂ ಸಹ ವಿಧಿಸಲಾಗಿದೆ. ಅದಕ್ಕಾಗಿ ಈ ಎಲ್ಲ ಸನ್ನಿವೇಶಗಳನ್ನು ಮನಗೊಂಡು ಈ ನಿರ್ಧರಕ್ಕೆ ಬರಲಾಗಿದೆ ಎಂದರು.