ಕುಮಟಾ : ನಗರದ ಶಾಂತಿಕಾ ಪರಮೇಶ್ವರಿ ದೇವಾಲಯದಲ್ಲಿ ಶ್ರಾವಣ ಮಾಸದ ಕೊನೆಯ ಶುಕ್ರವಾರವಾದ ಇಂದು ಅಂತ್ಯದ ವಿಜೃಂಭಣೆಯಿಂದ ಪೂಜಾ ಕಾರ್ಯಕ್ರಮ ನೆರವೇರಿತು.
ಮಹಾಪೂಜೆಗೆ ನೂರಾರು ಮುತೈದೆಯರು ಆಗಮಿಸಿ ಅರಿಶಿಣ ಕುಂಕುಮ ಪಡೆದು ತಾಯಿಯ ಆಶೀರ್ವಾದಕ್ಕೆ ಪಾತ್ರರಾದರು.
ಅದೇ ರೀತಿ ಕುಮಟಾ ತಾಲೂಕಿನ ಬಾಡ ಗ್ರಾಮದ ಗ್ರಾಮದೇವಿ ಶ್ರೀ ಕಾಂಚಿಕಾಂಬ ದೇವಾಲಯದಲ್ಲಿ ಪ್ರತಿವರ್ಷದಂತೆ ಶ್ರಾವಣ ಮಾಸದಲ್ಲಿ ನಡೆಯುವ ಭಜಾನಾ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ಗ್ರಾಮದ ವಿವಿಧ ಸಮುದಾಯಗಳಾದ ಹರಿಕಂತ್ರ ಸಮಾಜ, ಮಡಿವಾಳ ಸಮಾಜ, ಬ್ರಾಹ್ಮಣ ಸಮಾಜ , ನಾಮಧಾರಿ ಸಮಾಜ , ದೈವಜ್ಞ ಸಮಾಜ , ದೇಶಬಂಡಾರಿ ಸಮಾಜ ಸೇರಿದಂತೆ ಇನ್ನೂ ಅನೇಕ ಸಮಾಜದವರು ಮೂರುದಿನಗಳಿಂದ ನಿರಂತರವಾಗಿ ರಾತ್ರಿ ಹಗಲು ಸೇರಿದಂತೆ ನಿಗದಿತ ಅವದಿಯಲ್ಲಿ ಭಜನೆ ಮಾಡುವುದು ಇಲ್ಲಿನ ವಿಶೇಷ.
ಕಳೆದ ಮೂರು ದಿನದ ಹಿಂದೆ ಪ್ರಾರಂಭವಾಗಿದ್ದ ಭಜನಾ ಕಾರ್ಯಕ್ರಮ ಶ್ರಾವಣಮಾಸದ ಕೊನೆಯ ಶುಕ್ರವಾರವಾದ ಇಂದು ಮಧ್ಯಾಹ್ನ ತಾಯಿ ಕಾಂಚಿಕಾಂಬೆಯ ಮಹಾಪೂಜೆಯೊಂದಿಗೆ ಸಂಪನ್ನಗೊಂಡಿತು. ಮಹಾ ಪೂಜೆಗೆ ಸಾವಿರಾರು ಭಕ್ತರು ಆಗಮಿಸಿ ತಾಯಿಯ ದರ್ಶನ ಪಡೆದರು. ಬಳಿಕ ಅನ್ನ ಸಂತರ್ಪಣೆ ನಡೆಯಿತು.