ಕುಮಟಾ: ತಾಲೂಕಿನ ಗುಡಿಗಾರಗಲ್ಲಿ ಶಾಲೆಯಲ್ಲಿ ನಿಸರ್ಗ ಇಕೋ ಕ್ಲಬ್ ವತಿಯಿಂದ ಪರಿಸರ ಜಾಗೃತಿಯನ್ನು ಮೂಡಿಸುವ ಕಾರ್ಯಕ್ರಮವೊಂದು ವಿನೂತನವಾಗಿ ನಡೆಯಿತು.
ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದ ಹೊರವಲಯದಲ್ಲಿ ಮಾನವ ಸರಪಳಿ ನಿರ್ಮಿಸಿ ಪರಿಸರ ಗೀತೆಯನನ್ನು ಹಾಡಲಾಯಿತು.ಪ್ರತಿಯೊಂದು ಮಕ್ಕಳು ತಾವು ಹಿಡಿದ ಘೋಷಣೆಯ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯಾಧಿಕಾರಿಗಳು ಹಾಗೂ ಪರಿಸರ ಅಭಿಯಂತರರು ಹಾಜರಿದ್ದು ಉಪನ್ಯಾಸ ನೀಡಿದರು.ನಂತರ ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಲಾಯಿತು.