ಕಾರವಾರ: ನಗರದ ಜಿಲ್ಲಾ ರಂಗಮಂದಿರದಲ್ಲಿ ಜ.6 ಮತ್ತು 7ರ ಸಂಜೆ 7ಕ್ಕೆ ‘ನೀನಾಸಂ ನಾಟಕೋತ್ಸವ’ ಆಯೋಜನೆಗೊಂಡಿದೆ.
ಇಲ್ಲಿನ ಶ್ರೀರಾಘವೇಂದ್ರ ಮಠದ ಆಶ್ರಯದಲ್ಲಿ ಈ ನಾಟಕೋತ್ಸವ ಆಯೋಜನೆಗೊಳ್ಳುತ್ತಿದೆ.
ಜನವರಿ 6ರಂದು ಸಂಜೆ 7ಕ್ಕೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ರಚನೆಯ, ಬಿ.ಆರ್.ವೆಂಕಟರಮಣ ಐತಾಳ್ ನಿರ್ದೇಶನದ ‘ರಾಕ್ಷಸ-ತಂಗಡಿ’ ನಾಟಕ ಪ್ರದರ್ಶನವಿದೆ. 7ರಂದು ಸಂಜೆ 7ಕ್ಕೆ ಕನ್ನಡದ ಹಲವು ಕಾವ್ಯಗಳನ್ನಾಧರಿಸಿದ ರಂಗಪಠ್ಯ ’ಕರ್ಣ ಸಾಂಗತ್ಯ’ ಗಣೇಶ್ ಮಂದಾರ್ತಿ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ.
ನಾಟಕ ವೀಕ್ಷಣೆಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು, ಕಲಾವಿದರನ್ನು ಪ್ರೋತ್ಸಾಹಿಸುವಂತೆ ಸಂಘಟಕರು ಕೋರಿದ್ದಾರೆ.