ಹೊನ್ನಾವರ: ಮಕ್ಕಳನ್ನು ನೈಜವಾಗಿ, ನೈಸರ್ಗಿಕವಾಗಿ ಬೆಳೆಯಲು ಬಿಡಿ. ಗಾಳಿ, ಬಿಸಿಲಿಗೆ ಒಗ್ಗಿಕೊಂಡು ಬೆಳೆದರೆಮಾತ್ರ ಭವಿಷ್ಯದ ಉದ್ಯೋಗದ ದಿನಗಳಲ್ಲಿ ಅವರು ಅಂತಹ ಪರಿಸ್ಥಿತಿಯನ್ನು ಎದುರಿಸಿ ಗೆಲ್ಲಬಲ್ಲರು ಎಂದು ಶ್ರೀ ಮಾರುತಿ ರೆಸಿಡೆನ್ಸಿಯಲ್ ಸ್ಕೂಲ್‍ನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಶ್ರೀ ಕೃಷ್ಣಮೂರ್ತಿ ಭಟ್ಟ, ಶಿವಾನಿಯವರು ಮಾತನಾಡಿದರು.

ಸಂಸ್ಥೆಯ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಮಾರುತಿ ಗುರೂಜಿಯವರ ಅನುಪಸ್ಥಿತಿಯಲ್ಲಿ ಕಾರ್ಯದರ್ಶಿಗಳಾದ ಶ್ರೀಮತಿ ಅರ್ಪಿತಾರವರು ಕ್ರೀಡಾ ಧ್ವಜಾರೋಹಣ ಮಾಡಿದರು, ಶ್ರೀ ಕೃಷ್ಣಮೂರ್ತಿ ಭಟ್ಟ, ಶಿವಾನಿಯವರು ಕ್ರೀಡಾಕೂಟವನ್ನು ಕ್ರೀಡಾಜ್ಯೋತಿ ಹಸ್ತಾಂತರಿಸಿ ಉದ್ಘಾಟಿಸಿದರು, ಪಾಲಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ನರೇಂದ್ರ ನಾಯ್ಕ, ಪ್ರಾಂಶುಪಾಲರಾದ ಶ್ರೀ ವಿಠ್ಠಲ ನಾಯ್ಕ, ಶೈಕ್ಷಣಿಕ ನಿರ್ಧೇಶಕರಾದ ಶ್ರೀ ಜಿ. ಟಿ. ಹೆಗಡೆ, ಕ್ರಿಡಾಕೂಟದ ಬಹುಮಾನಗಳ ಪ್ರಾಯೋಜಕರಾದ ಶ್ರೀ ವಿಠ್ಠಲ ಶೇಟ್, ಶ್ರೀ ರಾಮಚಂದ್ರ ಭಟ್ಟ ಹಾಗೂ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು, ವಿದ್ಯಾರ್ಥಿ ಪಾಲಕರು ಉಪಸ್ಥಿತರಿದ್ದರು.

RELATED ARTICLES  ಶಿರಸಿ ಟಿ.ಎಸ್.ಎಸ್ ನಲ್ಲಿ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ವಸ್ತುಗಳ ನೂತನ ಮಾರಾಟ ಮಳಿಗೆ ಪ್ರಾರಂಭ

ವಿದ್ಯಾರ್ಥಿಗಳು ಪಥ ಸಂಚಲನದ ಮೂಲಕ ಗಣ್ಯರಿಗೆ ಗೌರವ ಸಲ್ಲಿಸಿದರು, ಕಿರಿಯರ ಹಾಗೂ ಹಿರಿಯರ ಸಾಮೂಹಿಕ ನೃತ್ಯರೂಪಕ ಎಲ್ಲರಿಗೂ ಮನರಂಜನೆ ನೀಡಿತು. ಶ್ರೀ ನರೇಂದ್ರ ನಾಯ್ಕರವರು ಮಾತನಾಡಿ ಸೋಲು ಗೇಲುವಿನಲ್ಲಿ ಮೇಲುಕೀಳೆಂಬುವುದಿಲ್ಲ ಭಾಗವಹಿಸುವುದು ಮುಖ್ಯ ಎಲ್ಲರೂ ಗೆಲ್ಲಬೇಕೆಂಬ ಮನೋಭಾವದಿಂದ ಆಟವಾಡಿ ಸೋಲಿನಿಂದ ಹತಾಶರಾಗಬೇಡಿ ಎಂದು ಗಣ್ಯರ ಪರವಾಗಿ ಎಲ್ಲಾ ಮಕ್ಕಳನ್ನು ಹರಸಿದರು. ಶ್ರೀ ಜಿ.ಟಿ. ಹೆಗಡೆಯವರು ಗಣ್ಯರಿಗೆ ಹಾಗೂ ಕ್ರೀಡಾಕೂಟಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಸರ್ವರನ್ನು ವಂದಿಸಿದರು. ಸಹಶಿಕ್ಷಕಿರಾದ ಕುಮಾರಿ ಜ್ಯೋತಿ ಹಾಗೂ ಕುಮಾರಿ ಸಂಗೀತಾರವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.

RELATED ARTICLES  ಮನೆ, ಮನಗಳಲ್ಲಿ ಕನ್ನಡ ಮೊಳಗಲಿ : ಆರ್. ಎಲ್. ಭಟ್ಟ

ವಿದ್ಯಾರ್ಥಿಗಳು ಕ್ರೀಡಾ ಪ್ರಮಾಣವಚನ ಮಾಡಿ ವಿವಿಧ ತಂಡಗಳನ್ನು ರಚಿಸಿಕೊಂಡು ಶಿಕ್ಷಕರ ಮಾರ್ಗದರ್ಶನ ಹಾಗೂ ಮೇಲ್ವಿಚಾರಿಕೆಯಲ್ಲಿ ಆಟಗಳನ್ನು ಪ್ರಾರಂಭಿಸಿದರು. ವಯಸ್ಸಿಗನುಗುಣವಾಗಿ ವಿವಿಧ ಹಂತಗಳಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೇಗಳನ್ನು ಆಯೋಜಿಸಲಾಗಿತ್ತು. ಎಲ್ಲಾ ವಿದ್ಯಾರ್ಥಿಗಳು ಕ್ರೀಡಾ ಮನೋಭಾವದಿಂದ ಭಾಗವಹಿಸಿ ಕ್ರೀಡಾಕೂಡವನ್ನು ಅತ್ಯುತ್ತಮವಾಗಿ ಯಸಶ್ವಿಗೊಳಿಸಿದರು.