ಕುಮಟಾ : ಉತ್ತರ ಕನ್ನಡದಲ್ಲಿ ಪ್ರಪ್ರಥಮ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಉದ್ದೇಶದಿಂದ ಕುಮಟಾಗೆ ಆಗಮಿಸಿದ ಡಾ.ಬಿ.ಆರ್ ಶೆಟ್ಟಿಯವರನ್ನು ಕುಮಟಾದ ಹವ್ಯಕ ಸಭಾಭವನದಲ್ಲಿ ಆತ್ಮೀಯವಾಗಿ ಬರಮಾಡಿಕೊಂಡು ಉತ್ತರ ಕನ್ನಡದ ಜನತೆಯ ಪರವಾಗಿ ಹೃದಯಪೂರ್ವಕ ಸ್ವಾಗತಿಸಲಾಯಿತು.

ಗೋವಾ ವಿಮಾನ ನಿಮ್ದಾಣದಿಂದ ಕುಮಟಾ ಆಗಮಿಸಿದ ಬಿ.ಆರ್ ಶೆಟ್ಟಿಯವರು ಮಾರ್ಗಮದ್ಯೆ ಮಿರ್ಜಾನ್ ಖೈರೆಯ ಬಳಿ ಆಸ್ಪತ್ರೆ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳ ವೀಕ್ಷಿಸಿದರು.

ನಂತರ ಕುಮಟಾದ ಹವ್ಯಕ ಸಭಾಭವನಕ್ಕೆ ಆಗಮಿಸಿದ ಶೆಟ್ಟಿಯವರು ವೇದಿಕೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶಾಸಕ ದಿನಕರ ಶೆಟ್ಟಿಯವರು ಉತ್ತರ ಕನ್ನಡಲ್ಲಿ ತುರ್ತು ಚಿಕಿತ್ಸೆಗೆ ಸುಸಜ್ಜಿತ ಆಸ್ಪತ್ರೆ ಇಲ್ಲದೆ ಜಿಲ್ಲೆಯ ಜನ ಪಡುತ್ತಿರುವ ಕಷ್ಟ,ಹಾಗೂ ಉತ್ತರ ಕನ್ನಡಕ್ಕೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯತೆಯ ಬಗ್ಗೆ ವಿವರಿಸಿದರಲ್ಲದೆ,ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಅಭಿಯಾನ ನಡೆಸಿದ ಎಲ್ಲರಿಗೂ ಕೃತಜ್ಞತೆ ತಿಳಿಸಿದರು.

RELATED ARTICLES  ಗೋಕರ್ಣದಲ್ಲಿ ಶಿಷ್ಯರನ್ನು ಹರಸಿದ ರಾಘವೇಶ್ವರ ಶ್ರೀ.

ನಂತರ ಮಾತನಾಡಿದ ಶ್ರೀಯುತ ಡಾ.ಬಿ.ಆರ್ ಶೆಟ್ಟಿಯವರು ಕುಮಟಾದಲ್ಲಿ ಆದಷ್ಟು ಶೀಘ್ರವಾಗಿ ಆಸ್ಪತ್ರೆ ನಿರ್ಮಾಣದ ಆಶಯ ಹೊಂದಿದ್ದೇನೆ.ಅದಕ್ಕೆ ನಮ್ಮ ಪ್ರಯತ್ನದ ಜೊತೆ ಜಿಲ್ಲೆಯ ಜನರೆಲ್ಲರ ಸಹಕಾರ ಬಯಸುತ್ತೇನೆ.ಸಣ್ಣ ಪುಟ್ಟ ತೊಡಕುಗಳ ಬಗ್ಗೆ ಕೇಳಿದ್ದೇನೆ.ಆದರೂ ಅವುಗಳನೆಲ್ಲ ಸರಿಪಡಿಸಿ,ಯಾರಿಗೂ ಸಮಸ್ಯೆ ಆಗದ ರೀತಿಯಲ್ಲಿ ಆಸ್ಪತ್ರೆ ನಿರ್ಮಾಣ ಆಗಬೇಕಿದೆ.
ಉಡುಪಿಯಲ್ಲಿ ಹೆರಿಗೆ ಆಸ್ಪತ್ರೆಯನ್ನು ನಿರ್ಮಿಸಿ ಉಚಿತವಾಗಿ ಚಿಕಿತ್ಸೆ ನೀಡುವ ಮೂಲಕ,ನನ್ನಿಂದಾಗುವ ಚಿಕ್ಕ ಸಹಾಯವನ್ನು ಜನತೆಗೆ ನೀಡಿದ್ದೇನೆ.
ಕುಮಟಾದಲ್ಲಿ ಉತ್ತಮ ಸೇವೆ ನೀಡುವುದರ ಜೊತೆಗೆ ಜಿಲ್ಲೆಯಲ್ಲಿಯೇ ಉತ್ತಮವಾದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವ ಗುರಿ ಹೊಂದಿದ್ದೇನೆ ಎಂದರು.

RELATED ARTICLES  ವಿವೇಕ ನಗರ ವಿಕಾಸ ಸಂಘದಿಂದ ವನಮಹೋತ್ಸವ.

ಈ ಸಂದರ್ಭದಲ್ಲಿ ಕಾರವಾರ ಮಾಜಿ ಶಾಸಕರಾದ ಸತೀಶ್ ಸೈಲ್, ಕುಮಟಾದ ಮಾಜಿ ಶಾಸಕರಾದ ಶಾರದಾ ಶೆಟ್ಟಿ, ಆರ್.ಜಿ ನಾಯ್ಕ,ರತ್ನಾಕರ್ ನಾಯ್ಕ,ಸೂರಜ್ ನಾಯ್ಕ ಸೋನಿ,ಪ್ರದೀಪ ನಾಯಕ ಹಾಗೂ ಇನ್ನಿತರರು ಹಾಜರಿದ್ದರು.
ಕಾರ್ಯಕಮಕ್ಕೆ ಜಿಲ್ಲೆಯ ಸಾವಿರಾರು ಜನ ಸಾಕ್ಷಿಯಾದರು.