ಕುಮಟಾ: ತಾಲೂಕಿನ ಪ್ರಸಿದ್ಧ ಶಿಕ್ಷಣ ಸಂಸ್ಥೆಯಾದ ದಿನಕರ ಪ್ರಾಥಮಿಕ ಹಾಗೂ ಪ್ರೌಢಶಾಲೆ ಧಾರೇಶ್ವರ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ವಿದ್ಯುಕ್ತವಾಗಿ ಜರುಗಿತು. ಕಾರ್ಯಕ್ರಮವನ್ನು ಹೊನ್ನಾವರದ ಸೈಂಟ್ ಥಾಮಸ್ ಪ್ರೌಢಶಾಲೆಯ ನಿವೃತ್ತ ಪ್ರಾಂಶುಪಾಲರಾದ ಎಸ್.ಜೆ.ಕೈರನ್ ರವರು ಉದ್ಘಾಟಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ಜೀವನದಲ್ಲಿ ಏನೇ ಕಷ್ಟ ಬಂದರೂ ಅದನ್ನು ಧೈರ್ಯವಾಗಿ ಎದುರಿಸಬೇಕು ಅಂದಾಗ ಮಾತ್ರ ಯಶಸ್ಸನ್ನು ಗಳಿಸಲು ಸಾದ್ಯ ಹಾಗೆ ಪಾಲಕರು ಕೂಡ ತಮ್ಮ ಮಕ್ಕಳ ಮೇಲೆ ಒತ್ತಡವನ್ನು ಹೇರಬಾರದು ಎಂದರು .
ಅಧ್ಯಕ್ಷತೆಯನ್ನು ದೇವಗಿರಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಸುರೇಶ. ಟಿ. ನಾಯ್ಕ ವಹಿಸಿ ಮಾತನಾಡುತ್ತಾ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ನಾನು 10 ವರ್ಷಗಳಿಂದ ಭಾಗವಹಿಸುತ್ತಿದ್ದು ಅತ್ಯುತ್ತಮವಾಗಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತಿದ್ದಾರೆ ಎಂದರು.
ವೇದಿಕೆಯಲ್ಲಿ ಶಾಲಾ ಸಮಿತಿ ಸದಸ್ಯ ಮಂಜುನಾಥ ಭಟ್ಟ, ಸಚಿನ್ ನಾಯ್ಕ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರು, ಕೋಶಾಧ್ಯಕ್ಷರು,ಸದಸ್ಯರು, ಜನತಾ ವಿದ್ಯಾಲಯ ಧಾರೇಶ್ವರದ ಮುಖ್ಯಾಧ್ಯಾಪಕಿಯವರು ಉಪಸ್ಥಿತರಿದ್ದರು, ದಿನಕರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಜಗದೀಶ ಗುನಗಾರವರು ವಾರ್ಷಿಕ ವರದಿ ವಾಚಿಸಿದರು. ಪ್ರಾಥಮಿಕ ವಿಭಾಗದ ಮುಖ್ಯಾಧ್ಯಾಪಕರಾದ ವೆಂಕಟೇಶ್ ಶೇಟ್ ರವರು ಎಲ್ಲರನ್ನು ಸ್ವಾಗತಿಸಿ ಶಿಕ್ಷಕರಾದ ಯೋಗೇಶ್ ಪಟಗಾರ ವಂದಿಸಿದರು ಶ್ರೀಮತಿ ಗಾಯತ್ರಿ ಹೆಗಡೆ ನಿರೂಪಿಸಿದರು.