ಭಟ್ಕಳ :- ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಉತ್ತರಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.ಪಟ್ಟಣದ ತಂಜೀಮ್ ಸಂಸ್ಥೆ ವತಿಯಿಂದ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಸಾವಿರಾರು ಮುಸಲ್ಮಾನ ಬಾಂಧವರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಭಟ್ಕಳ ನಗರದಾಧ್ಯಾಂತ ಅಂಗಡಿ ಮುಂಗಟ್ಟುಗಳು ಬಂದ್ ಮಾಡಲಾಗಿದ್ದು ಬಿಗಿ ಪೋಲಿಸ್ ಬಂದವಸ್ತ್ ಕಲ್ಪಿಸಲಾಗಿತ್ತು.

RELATED ARTICLES  ಊರೂರು ಅಲೆಯುವ ಅನಿಲಗೋಡ ಕಳ್ಳರು :ಜಾತ್ರಾ ಮಹೋತ್ಸವ ಮೇ 21 ರಂದು 

ಪಟ್ಟಣದ ಸ್ಪೋರ್ಟ್ಸ್ ಕ್ಲಬ್ ಮೈದಾನದಿಂದ ಪ್ರತಿಭಟನೆ ಪ್ರಾರಂಭವಾಗಿ ಅಂಜುಮನ್ ಮೈದಾನದಲ್ಲಿ ಸಮಾವೇಶವನ್ನ ನಡೆಸಿ ಅಲ್ಲಿಯೇ ಭಟ್ಕಳ ಎಸಿಗೆ ಮನವಿ ಸಲ್ಲಿಸಲಾಯಿತು.

RELATED ARTICLES  ಓಂ ಬೀಚ್ ಕ್ರಾಸ್‌ನ ಅರಣ್ಯ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ

ಇನ್ನು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗಿಯಾದ ಪ್ರತಿಭಟನಾಗಾರರು ಕೇಂದ್ರ ಸರ್ಕಾರ ಕಾಯ್ದೆಯನ್ನ ಹಿಂಪಡೆಯುವಂತೆ ಆಗ್ರಹಿಸಲಿದ್ದಾರೆ. ಪ್ರತಿಭಟನೆಯಲ್ಲಿ ಐದು ಸಾವಿರಕ್ಕೂ ಹೆಚ್ಚು ಮುಸ್ಲಿಂ ಜನರು ಭಾಗಿಯಾಗಿದ್ದು ಸಿ.ಐ.ಟಿಯು ಸೇತಿದಂತೆ ಎಡ ಪಂತಿಯ ಸಂಘಟನೆಗಳು ಬೆಂಬಲ ನೀಡಿದರು.