ಕುಮಟಾ: ತಾಲೂಕಿನ ಅರಣ್ಯ ಅತಿಕ್ರಮಣದಾರರ ಸಭೆಯನ್ನು ಸ್ಥಳಿಯ ಗಿಬ್ಬ್ ಹೈಸ್ಕೂಲ ಹತ್ತಿರದಲ್ಲಿರುವ ದೇವಕಿ ಕಾನ್ಫರೆನ್ಸ ಹಾಲ್‍ನಲ್ಲಿ ಜನೆವರಿ 8 ರ ಮುಂಜಾನೆ 10.30 ಕ್ಕೆ ಕರೆಯಲಾಗಿದೆ ಎಂದು ಕುಮಟಾ ತಾಲೂಕು ಅರಣ್ಯ ಅತಿಕ್ರಮಣದಾರ ಹೋರಾಟಗಾರರ ವೇದಿಕೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯ ಶರಾವತಿ ಅಭ್ಯಯಾರಣ್ಯಕ್ಕೆ ಕುಮಟಾ ತಾಲೂಕಿನ ಸೊಪಿನಹೊಸಳ್ಳಿ, ಮೇದಿನಿ, ಹೆಕ್ಕಳಿ, ಮೂರ್ಸೆ, ಬಂಗಣಿ, ಮುದ್ದಿನಹೊಸಳ್ಳಿ, ಮೇದಿನಿ, ಮೂರ್ಸೆ, ಬಂಗಣಿ, ಮುದ್ದನಹಳ್ಳಿ, ಹುಳ್ಳೂರು ಗ್ರಾಮಗಳ ಪ್ರದೇಶವನ್ನು ಸೇರ್ಪಡಿಸಿರುವ ಕುರಿತು ಹೋರಾಟದ ರೂಪುರೇಶೆ ಚರ್ಚಿಸಲು ಅರಣ್ಯ ಹಕ್ಕು ಮಂಜೂರಿ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗುತ್ತಿರುವ ಕುರಿತು ಹಾಗೂ ಅರಣ್ಯ ಹಕ್ಕು ಕಾಯಿದೆಯಲ್ಲಿ ಮಂಜೂರಿಗೆ ಸಂಬಂಧಿಸಿ ಅವಶ್ಯ ದಾಖಲೆಗಳ ಕುರಿತು ಮಾಹಿತಿ ನೀಡುವ ಉದ್ದೇಶದಿಂದ ಕರೆಯಲಾದ ಸಭೆಗೆ ಅಧ್ಯಕ್ಷತೆಯನ್ನು ವೇದಿಕೆ ಜಿಲ್ಲಾಧ್ಯಕ್ಷ ಎ.ರವೀಂದ್ರ ನಾಯ್ಕ ವಹಿಸಲಿರುವುದರಿಂದ ಆಸಕ್ತ ಅರಣ್ಯ ಅತಿಕ್ರಮಣದಾರರು ಆಗಮಿಸಬೇಕಾಗಿ ವೇದಿಕೆ ತಾಲೂಕಾಧ್ಯಕ್ಷ ಮಂಜುನಾಥ ಮರಾಠಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.