ಕುಮಟಾ : ದಿವಗಿ ಬಳಿ ಆಯ್ ಆರ್ ಬಿ ಯವರು ನಿರ್ಮಿಸಿದ ಅವೈಜ್ಞಾನಿಕ ರಸ್ತೆ ತಿರುವು,ಹಾಗೂ ಸರ್ವಿಸ್ ರಸ್ತೆ ಸೇರಿದಂತೆ ಮೇಲ್ಸೆತುವೆ ನಿರ್ಮಾಣದ ಕುರಿತು ದಿವಗಿ ಗ್ರಾಮಸ್ಥರು ಜಿಲ್ಲಾಧಿಕಾರಿ ಹರೀಶಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿಗಳು ಮೇದಿನಿ ಗ್ರಾಮ ವಾಸ್ತವ್ಯ ಮುಗಿಸಿ,ಕಾರವಾರ ಕಛೇರಿಗೆ ತೆರಳುವ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ 66 ರ ದಿವಗಿ ಬಳಿ ಅವರನ್ನು ಭೇಟಿ ಮಾಡಿದ ಗ್ರಾಮಸ್ಥರು, ಮನವಿ ಸಲ್ಲಿಸಿ ವಸ್ತುಸ್ಥಿತಿಯ ಕುರಿತು ಮಾಹಿತಿ ನೀಡಿದರು.
ಈ ಸಂಬಂಧ ಜ. 9 ರಂದು ಪ್ರಮುಖರನ್ನು ಜಿಲ್ಲಾಧಿಕಾರಿಗಳು ಆಹ್ವಾನಿಸಿದ್ದು ಮಾತುಕತೆ ನಡೆಸಲಿದ್ದಾರೆ.