ಕುಮಟಾ : ಹಾಲಕ್ಕಿ ಸಮಾಜದವರನ್ನ ಮುಖ್ಯವಾಹಿನಿಗೆ ತರಬೇಕು ಮತ್ತು ಅವರಲ್ಲಿರುವ ಕ್ರೀಡೆ, ಕಲೆ, ಸಂಸ್ಕøತಿಯನ್ನ ಉಳಿಸಬೇಕು ಎನ್ನುವ ಉದ್ದೇಶದಿಂದ ಕಬ್ಬರ್ಗಿ ಜೆ.ಕೆ. ಬಾಯ್ಸ್ ತಂಡದವರು ಎರಡು ವರ್ಷಗಳಿಂದ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನ ಅದ್ಧೂರಿಯಾಗಿ ಆಯೋಜಿಸಿಕೊಂಡು ಬರುತ್ತಿದ್ದಾರೆ. ಕುಮಟಾ ತಾಲೂಕಿನ ಅಳಕೋಡ ಗ್ರಾಮ ಪಂಚಾಯತ್‍ನ ಕಬ್ಬರ್ಗಿಯಲ್ಲಿ ಶ್ರೀ ಜಟಗೇಶ್ವರ ಯುವಕ ಮಿತ್ರ ಮಂಡಳಿ ಹಾಗೂ ಜೆ.ಕೆ. ಬಾಯ್ಸ್ ಇವರ ಆಶ್ರಯದಲ್ಲಿ ಜಿಲ್ಲಾಮಟ್ಟದ ದ್ವಿತೀಯ ವರ್ಷದ ಹೊನಲು ಬೆಳಕಿನ ಹಾಲಕ್ಕಿ ಸಮಾಜದ ವಾಲಿಬಾಲ್ ಪಂದ್ಯಾವಳಿ ಶನಿವಾರದಂದು ಕಬ್ಬರ್ಗಿ ಶ್ರೀ ಜಟಗೇಶ್ವರ ಕ್ರೀಡಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಬ್ಬರ್ಗಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರಾದ ಆರ್.ಡಿ. ನಾಯ್ಕರವರನ್ನ ಸನ್ಮಾನಿಸಲಾಯಿತು. ನಂತರ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಹೊನ್ನಪ್ಪ ನಾಯ್ಕ ಮಾತನಾಡಿ ಗ್ರಾಮೀಣ ಕ್ರೀಡೆಗಳಲ್ಲೊಂದಾದ ವಾಲಿಬಾಲ್ ಪಂದ್ಯಾವಳಿಯನ್ನ ಕಳೆದ ಎರಡು ವರ್ಷಗಳಿಂದ ಯಶಸ್ವಿಯಾಗಿ ಈ ಒಂದು ಸಂಘಟನೆ ನಡೆಸಿಕೊಂಡು ಬರುತ್ತಿದ್ದಾರೆ. ಕ್ರೀಡೆಯನ್ನ ಸಂಘಟಿಸುವುದು ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಅತ್ಯಂತ ಕಷ್ಟ ಎಂದರು. ಹಾಗೆಯೇ ಕ್ರೀಡೆಯಲ್ಲಿ ಭಾಗವಹಿಸುವಂತಹ ಸಂದರ್ಭದಲ್ಲಿ ಕ್ರೀಡಾಪಟುಗಳು ಕ್ರೀಡಾ ಮನೋಭಾವನೆಯಿಂದ ಆಡಬೇಕು ಸೋಲು ಗೆಲುವುಗಳು ಮುಖ್ಯವಲ್ಲ ನಾವು ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ನಾವು ಶಾರೀರಿಕವಾಗಿ, ಮಾನಸಿಕವಾಗಿ ಸದೃಢರಾಗಲು ಸಾಧ್ಯವಾಗುತ್ತದೆ ಆ ನಿಟ್ಟಿನಲ್ಲಿ ಚಿಂತನೆ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.

RELATED ARTICLES  ಚುಟುಕು ಬ್ರಹ್ಮ ದಿನಕರ ದೇಸಾಯಿ ಸಂಸ್ಮರಣೆ ಸಂಪನ್ನ.


ಸಂಸ್ಕøತಿ, ಕಲೆ, ಮಾನವೀಯತೆ ಇವೆಲ್ಲ ಇದೆ ಅಂತಾದರೆ ಅದು ನಮ್ಮ ಹಾಲಕ್ಕಿ ಸಮಾಜದಲ್ಲಿ ಮಾತ್ರ ಹಾಗೂ ಸಂಸ್ಕøತಿ, ಕಲೆ, ಸಾಹಿತ್ಯ ಮತ್ತು ಹಿಂದಿನ ಪರಂಪರೆಯನ್ನ ನಶಿಸಿ ಹೋಗದಂತೆ ಹಾಲಕ್ಕಿ ಸಮಾಜದವರು ನಡೆಸಿಕೊಂಡು ಬಂದಿದ್ದಾರೆ.

ಅತಿಥಿಗಳಾದ ಗ್ರಾಮ ಪಂಚಾಯತ್ ಸದಸ್ಯರಾದ ದೇವು ಟಿ. ಗೌಡ ಮಾತನಾಡಿ ಇಂದು ಕಬ್ಬರ್ಗಿಯಲ್ಲಿ ಹಬ್ಬದ ವಾತಾವರಣವಿದೆ ಯಾಕೆಂದರೆ ಜೆ.ಕೆ. ಬಾಯ್ಸ್ ತಂಡದವರು ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನ ಆಯೋಜಿಸಿದ್ದಾರೆ. ಈ ಒಂದು ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಹಾಗೂ ಸೋಲು ಗೆಲುವು ಮುಖ್ಯವಲ್ಲ ಎಂದರು.

ಕಾರ್ಯಕ್ರಮದ ಅಧ್ಯಕ್ಷರಾದ ಜಿಲ್ಲಾ ಪಂಚಾಯತ್ ಸದಸ್ಯರಾದ ಗಜಾನನ ಪೈ ಮಾತನಾಡಿ ಜೆ.ಕೆ. ಬಾಯ್ಸ್ ತಂಡವು ಕಳೆದ ಎರಡು ವರ್ಷಗಳಿಂದ ಇಂತಹ ಒಂದು ಕ್ರೀಡಾ ಚಟುವಟಿಕೆಯನ್ನ ನಡೆಸಿಕೊಂಡು ಬರುತ್ತಿದ್ದಾರೆ. ಒಂದು ಕ್ರೀಡೆ ನಡೆಸುವುದು ಬಹಳ ಸುಲಭ, ಆದರೆ ಅವರ ಒಂದು ಸಂಘಟನೆಯ ಪದಾಧಿಕಾರಿಗಳನ್ನ, ಸದಸ್ಯರನ್ನ ಒಗ್ಗೂಡಿಸಿಕೊಂಡು ಕಾರ್ಯಕ್ರಮ ಆಯೋಜನೆ ಮಾಡುವುದು ಬಹಳ ಕಷ್ಟ ಸಾಧ್ಯ ಅಂತಹದರಲ್ಲಿ ಮಂಜುನಾಥ ಗೌಡರವರು ಎರಡು ವರ್ಷಗಳಿಂದ ಈ ಒಂದು ಕಾರ್ಯಕ್ರಮವನ್ನ ನಡೆಸಿಕೊಂಡು ಬರುತ್ತಿದ್ದಾರೆ ಎಂದರು.

RELATED ARTICLES  ಪಿ.ಆರ್ ನಾಯ್ಕರ "ದೇವಗಿರಿ" ಕೃತಿ ಲೋಕಾರ್ಪಣೆ.

ನಂತರದಲ್ಲಿ ವಾಲಿಬಾಲ್ ಕ್ರೀಡಾಂಗಣವನ್ನು ಜಿಲ್ಲಾ ಪಂಚಾಯತ್ ಸದಸ್ಯರಾದ ಗಜಾನನ ಪೈ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ರೈತರಾದ ಶ್ರೀಕಾಂತ ನಾಯ್ಕ, ಜಯಂತ ಎಸ್. ಗೌಡ, ಗ್ರಾಮ ಪಂಚಾಯತ್ ಸದಸ್ಯರಾದ ಸವಿತಾ ಸುಗ್ಗಿ ಗೌಡ, ಉದ್ದಿಮೆದಾರರಾದ ಲಂಭೋಧರ ಗುನಗಾ, ಗಣಪು ಟಿ. ಗೌಡ, ವಿನೋದ ಗೌಡ, ತುಳಸು ಗೌಡ, ಕಾರ್ತಿಕ ಭಟ್, ಹಾಲಕ್ಕಿ ಸಮಾಜದ ಊರ ಗೌಡರು, ಶ್ರೀ ಜಟಗೇಶ್ವರ ಯುವಕ ಮಿತ್ರ ಮಂಡಳಿ ಅಧ್ಯಕ್ಷರಾದ ಮಂಜುನಾಥ ಗೌಡ ಹಾಗೂ ಸರ್ವ ಸದಸ್ಯರು, ಊರ ನಾಗರೀಕರು ಉಪಸ್ಥಿತರಿದ್ದರು.