ಕುಮಟಾ: ಪಟ್ಟಣದ ಹೆಗಡೆ ಕ್ರಾಸ್ ಬಳಿಯ ಕಿತ್ತೂರು ರಾಣಿ ಚೆನ್ನಮ್ಮ ಪಾರ್ಕ್ ಸಮೀಪದ ಗಾಂದಿನಗರದ ನಿವಾಸಿಯಾದ ಗಜಾನನ ಗೋಪಾಲಕೃಷ್ಣ ಗೌರಯ್ಯ ಎನ್ನುವವರ ಮನೆಯಲ್ಲಿ ಕಳೆದ ಜ.1 ರಂದು ಯಾರೂ ಇಲ್ಲದ ವೇಳೆ ಕಳ್ಳತನ ನಡೆಸಿ, 9,81,000 ರೂಪಾಯಿ ಮೌಲ್ಯದ ಸುಮಾರು 392 ಗ್ರಾಂ ತೂಕದ ಬಂಗಾರದ ಆಭರಣಗಳ ಕಳ್ಳತನ ಮಾಡಲಾಗಿತ್ತು. ಈ ಕುರಿತಂತೆ ಕುಮಟಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಕುಮಟಾ ಪೋಲಿಸರು ಪ್ರಕರಣ ಭೇದಿಸಿ, ಪ್ರಕರಣ ದಾಖಲಾದ ಕೇವಲ ಮೂರು ದಿನಗಳಲ್ಲಿ ಆರೋಪಿಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಇಬ್ಬರು ಆರೋಪಿಗಳಾದ ಗೋಪಿ ಗಣೇಶನ್, ಕಳತ್ತೂರ್ ಅರಸಮರತಿರ್,ಕಾಂಚಿಪುರಂ ತಮಿಳುನಾಡು, ಹಾಗೂ ಡೇವಿಡ್ ಪ್ರಾನ್ಸಿಸ್ ಮಾಗಡಿ ರೋಡ್ ಬೆಂಗಳೂರಿನ ನಿವಾಸಿಗಳಾಗಿದ್ದು,ಇನ್ನೋರ್ವ ಆರೋಪಿ ರಾಜು ಎಂಬಾತ ತಲೆಮರೆಸಿಕೊಂಡಿದ್ದಾನೆ.
ಆರೋಪಿಗಳಿಂದ ಕಳ್ಳತನ ಮಾಡಿದ್ದ ಸುಮಾರು 289 ಗ್ರಾಂ ಬಂಗಾರದ ಆಭರಣಗಳು, ನಗುದು,ಕಳ್ಳತನಕ್ಕೆ ಬಳಸಿದ ಆಯುಧ ಮತ್ತು ಕೃತ್ಯಕ್ಕೆ ಬಳಸಿದ ಕಾರನ್ನು ಜಪ್ತಿಮಾಡಲಾಗಿದೆ.

RELATED ARTICLES  ಕಲ್ಲು ತೆಗೆಯುವಾಗ ಗೋಚರಿಸಿತು ಸುರಂಗ: ಕುಮಟಾ ಜನರ ಕುತೂಹಲ ಕೆರಳಿಸಿದೆ ಈ ಜಾಗ..!

ಆರೋಪಿತರು ತಮಿಳುನಾಡು, ಮತ್ತು ಬೆಂಗಳೂರಿನವರಾಗಿದ್ದು ಬೆಂಗಳೂರಿನ ಹಲಾವರು ಕಳ್ಳತನ ಮತ್ತು ದರೋಡೆ ಯತ್ನ ಪ್ರಕ್ರಣಗಳಲ್ಲಿ ಭಾಗಿಯಾಗಿದ್ದವರಾಗಿದ್ದು, ಜ.01 ರಂದು ಹೊಸ ವರ್ಷಾಚರಣೆಗೆಂದು ಗೋವಾಕ್ಕೆ ತೆರಳಿ ವಾಪಸ್ಸಾಗುವ ಸಂಧರ್ಭದಲ್ಲಿ ಅಂಕೋಲಾದ ಕೇಬಲ್ ಆಫಿಸ್ ಒಂದರ ಬಾಗಿಲು ಒಡೆದು ನಗದು ಹಣವನ್ನು ಕಳ್ಳತನ‌ ಮಾಡಿದ್ದಲ್ಲದೇ, ಕುಮಟಾದಲ್ಲಿ ಮನೆಯ‌ ಹಿಂಬಾಗಿಲು ಒಡೆದು ಬಂಗಾರದ ಆಭರಣಗಳನ್ನು ಕಳ್ಳತನ‌ ಮಾಡಿ ತೆರಳಿದ್ದರು. ನಂತರ ಕಳೆದ ಭಾನುವಾರ ನಸುಕಿನ‌ ವೇಳೆ‌ ಮತ್ತೆ ಕಳ್ಳತನ‌ ಮಾಡಲು ಕುಮಟಾಕ್ಕೆ‌ ಬರುತ್ತಿರುವ ಸಂದರ್ಭದಲ್ಲಿ ಪಟ್ಟಣದ ಗಿಬ್ ವೃತ್ತದ ಬಳಿ ಎಸ್.ಪಿ ಶಿವಪ್ರಕಾಶ್ ದೇವರಾಜ, ಎಎಸ್ಪಿ ನಿಖಿಲ್ ಬಿ, ಸಿಪಿಐ ಪರಮೇಶ್ವರ ಗುನಗಾ, ಪಿಎಸೈ ಆನಂದ ಮೂರ್ತಿ, ಕ್ರೈಂ ಪಿಎಸೈ ಸುಧಾ ಅಘನಾಶಿನಿ‌ ನೇತ್ರತ್ವದ ತಂಡ ತಪಾಸಣೆ ನಡೆಸುತ್ತಿದ್ದ ವೇಳೆ ಆರೋಪಿತರನ್ನು‌ ಕಳ್ಳತನ ಮಾಡಿದ‌ ಆಭರಣಗಳ ಸಮೇತ ಬಂಧಿಸುವಲ್ಲಿ‌ ಯಶಸ್ವಿಯಾಗಿದ್ದಾರೆ. ಈ ಪ್ರಕರಣ ಭೇಧಿಸುವಲ್ಲಿ‌ ಸಿಬ್ಬಂಧಿಗಳಾದ ಚಾಲಕ ತಿಮ್ಮಣ್ಣ ನಾಯಕ, ಮಾರುತಿ ಗಾಳಪೂಜಿ,ದಯಾನಂದ ನಾಯ್ಕ, ಸಂತೋಷ ಬಾಳೆರಾ, ಕೃಷ್ಣ ಎನ್.ಜೆ, ಬಸವರಾಜ‌ ಜಾಡರ, ಹುಚ್ಚಪ್ಪ ಚಾವಡಿ, ಸುರೇಂದ್ರ ಮಗದಮ್ಮ, ಹಾಲಪ್ಪ ಬಾಗಿ ಹಾಗೂ‌ ಹೋಮ್ ಗಾರ್ಡಗಳಾದ‌ ಬಾಬುರಾಯ, ಮೋಹನ‌‌ ಮತ್ತು ನಾರಾಯಣ‌ ಪಟಗಾರ ಇವರುಗಳು ಸಹಕರಿಸಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾರಿಗಳಾದ ಶಿವಪ್ರಕಾಶ್ ದೇವರಾಜ ಹಾಗೂ ಭಟ್ಕಳ‌‌ ಎ.ಎಸ್ಪಿ ನಿಖಿಲ್‌ ಬಿ‌ ಅವರು ಸಿಬ್ಬಂಧಿಗಳ‌ ಉತ್ತಮ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿ‌ ಸೂಕ್ತ ಬಹುಮಾನ ಘೋಶಿಸಿದ್ದಾರೆ.

                           ©-  #UK_Express.