ಅಂಕೋಲಾ : ಪ್ರತಿಯೊಬ್ಬರು ಸಮಾಜದ ಋಣದಲ್ಲಿ ಬೆಳೆದಿದ್ದು, ಸಮಾಜದ ಋಣವನ್ನು ತೀರಿಸುವುದು ಎಲ್ಲರ ಕರ್ತವ್ಯವಾಗಿದೆ. ಸೇವೆಯ ಘನ ಉದ್ದೇಶದಿಂದ ಉದಯಿಸಿದ, 102 ವರ್ಷಗಳ ಭವ್ಯ ಇತಿಹಾಸ ಹೊಂದಿದ, ವಿಶ್ವಮಾನ್ಯತೆ ಪಡೆದ ಲಯನ್ಸ ಕ್ಲಬ್ ಅಂತರಾಷ್ಟ್ರೀಯ ಸಂಸ್ಥೆಯಾಗಿದೆಯೆಂದು ಲಯನ್ಸ 317ಃಯ ಎಮ್.ಜೆ.ಎಫ್ ಡಿಸ್ಟ್ರಿಕ್ಟ ಗವ್ಹರ್ನರ ಶಿಶಿಂದ್ರನ್ ನಾಯರ್ ಹೇಳಿದರು. ಅಂಕೋಲಾ ಲಯನ್ಸ ಕ್ಲಬ್ ಕರಾವಳಿ ಹಮ್ಮಿಕೊಂಡಿದ್ದ ಡಿಸ್ಟ್ರಿಕ್ಟ ಗವ್ಹರ್ನರ ಬೇಟಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ಅಂಕೋಲೆಯ ಲಯನ್ಸ ಕ್ಲಬ್ ಕರಾವಳಿ 36ಕ್ಕೂ ಹೆಚ್ಚು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ರಿಜನ್‍ನಲ್ಲಿ ಅಗ್ರಸ್ಥಾನದಲ್ಲಿರುವುದು ಶ್ಲಾಘನೀಯವೆಂದರು.


ಅಂಕೋಲೆಯ ಪಿ.ಎಮ್ ಹೈಸ್ಕೂಲಿನ ರೈತಭವನದಲ್ಲಿ ಜರುಗಿದ ವರ್ಣರಂಜಿತ ಕಾರ್ಯಕ್ರಮದಲ್ಲಿ ಪ್ರಥಮ ಪ್ರಾಂತಪಾಲ ಪಿ.ಎಮ್.ಜೆ.ಎಫ್ ಗೀರಿಶ ಕುಚನಾಡ ಕ್ಲಬ್‍ಗೆ ಹೊಸದಾಗಿ ಸೇರಿದ ಸದಾನಂದ ಶೆಟ್ಟಿ, ಓಂ ಪ್ರಕಾಶ ಪಟೇಲ್, ಚೆನ್‍ಸಿಂಗ್ ಚೌವ್ಹಾನ ಇವರಿಗೆ ಪ್ರಮಾಣ ವಚನ ಭೋದಿಸಿ ಮಾತನಾಡುತ್ತಾ “ಒಬ್ಬನೇ ತಿಂದವನ ಹೊಟ್ಟೆ ಎಂದು ತುಂಬಿಲ್ಲ, ಹಂಚಿ ತಿಂದವನ ಹೊಟ್ಟೆ ಎಂದು ಖಾಲಿ ಉಳಿಯದು” ಎಂದು ಸೇವೆಯ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆರ್.ಸಿ ವಿನೋದ ನಾಯ್ಕ, “ಸಮಾಜಮುಖಿ ಕೆಲಸಗಳನ್ನು ಹಮ್ಮಿಕೊಂಡ ಅಂಕೋಲಾ ಲಯನ್ಸ ಕ್ಲಬ್ಬಿನ್‍ಕಾರ್ಯ ಇತರರಿಗೆ ಮಾದರಿಯಾಗಿದೆ” ಎಂದರು. ಜೋನ್ ಚೇರ್‍ಪರ್ಸನ್ ಲಾ. ಸುರೇಶ ಮಾತನಾಡಿ ಅಂಕೋಲಾ ಕ್ಲಬ್ ಜನಹಿತ ಕಾರ್ಯಗಳನ್ನು ಮಾಡುವ ಮೂಲಕ ಜನಮನ್ನಣೆ ಪಡೆದಿದೆ ಎಂದರು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ಲಬ್‍ನ ಅಧ್ಯಕ್ಷ ಮಹಾಂತೇಶ ರೇವಡಿ ತಮ್ಮ ಸಾಧನೆಗೆ ಕ್ಲಬ್‍ನ ಸದಸ್ಯರ ಹಾಗೂ ದಾನಿಗಳ ಸಹಕಾರವೇ ಕಾರಣವೆಂದರು. ನಮ್ಮ ಕ್ಲಬ್ ಮುಂದಿನ ದಿನಗಳಲ್ಲಿ ಕೂಡಾ ಇನ್ನೂ ಹಲವು ಹತ್ತು ಜನಹಿತ ಕಾರ್ಯಕ್ರಮಗಳನ್ನು ಜಾರಿಗೆ ತರಲಿದೆಯೆಂದರು. ವೇದಿಕೆಯಲ್ಲಿ ಡಿಸ್ಟ್ರಿಕ್ಟ ಕ್ಯಾಬಿನೇಟ್ ಸೆಕ್ರೇಟರಿ ಲಾ. ಜಯಮೋಲ್ ಉಪಸ್ಥಿತರಿದ್ದರು.

RELATED ARTICLES  ಬಸ್ ಡಿಕ್ಕಿ : ಓರ್ವ ಸಾವು


ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿ ಉದಯೋನ್ಮೂಖ ಗಾಯಕಿ ಕು.ಚೈತ್ರಾ ರಮಾಕಾಂತ ನಾಯಕ ಹಾಗೂ ಪಿ.ಎಮ್ ಹೈಸ್ಕೂಲಿನ ಸಿಬ್ಬಂದಿ ಸರಳ ಸಜ್ಜನ ಸತೀಶ ಕಾಮತರನ್ನು ಕ್ಲಬ್‍ನ ಪರವಾಗಿ ಸನ್ಮಾನಿಸಲಾಯಿತು. ಲಾ. ಗಿರಿಧರ ಆಚಾರ್ಯ, ಲಾ. ಶಂಕರ ಹುಲಸ್ವಾರ, ಹೊಸ ಸದಸ್ಯರ, ಸನ್ಮಾನಿತರ ಪರಿಚಯ ಮಾಡಿಕೊಟ್ಟರು. ಲಾ. ಎಸ್.ಆರ್. ಉಡುಪಿಯವರು ಪ್ರಾಯೋಜಿಸಿದ ‘ಉತ್ತಮ ಓದುಗ ಪ್ರಶಸ್ತಿ’ಯನ್ನು ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿ ಕುಮಾರ ಜ್ಲಾನದೇವ ಗೌಡ, ಜಿ.ಸಿ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಕಾವ್ಯಾ ಗಾಂವಕರ ಪಡೆದರು. ಕ್ಲಬ್ಬಿಗೆ ಅಮೂಲ್ಯ ದಶಕಗಳ ಸೇವೆ ಸಲ್ಲಿಸಿದ ಲಾ. ಗಿರಿಧರ ಆಚಾರ್ಯ ಲಾ. ದೇವಾನಂದ ಗಾಂವಕರ, ಡಿಸ್ಟ್ರಿಕ್ಟ ಗವ್ಹರ್ನರ ಪ್ರಶಸ್ತಿ ನೀಡಿ ಸನ್ಮಾನಿಸಿದರು.

RELATED ARTICLES  ವಿಧಾನಸಭಾ ಚುನಾವಣೆಗೆ 50 ಕ್ಷೇತ್ರಗಳಲ್ಲಿ ಸಾಧು- ಸಂತರು ಸ್ಪರ್ಧಿಸಲಿದ್ದಾರೆ : ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ 


ಕು. ಚೈತ್ರಾ ನಾಯಕರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಕ್ಲಬ್‍ನ ಸ್ಥಾಪಕ ಅಧ್ಯಕ್ಷ ಲಾ.ಕೆ.ವಿ.ಶೆಟ್ಟಿ ಎಲ್ಲರನ್ನು ಸ್ವಾಗತಿಸಿದರು. ಲಾ. ಸಂಜಯ ಅರುಂಧೇಕರ ದ್ವಜವಂದನಾ ಕಾರ್ಯಕ್ರಮ ನಡೆಸಿಕೊಟ್ಟರು. ಡಾ. ಕುರುಣಾಕರ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ಲಾ. ಎಸ್.ಆರ್.ಉಡುಪಿ ಸಾಧನೆಯ ವರದಿಯನ್ನು ವಾಚಿಸಿದರು. ಪತ್ರಕರ್ತ ಸುಬಾಷ ಕಾರೆಬೈಲ್ ಸೊಗಸಾಗಿ ಕಾರ್ಯಕ್ರಮ ನಿರ್ವಹಿಸಿದರು. ಡಾ. ಕರುಣಾಕರ ವಂದಿಸಿದರು. ಸಭಿಕರ ಪರವಾಗಿ ಪ್ರೋ. ಮೋಹನ ಹಬ್ಬು, ಡಾ. ಆರ್.ಜಿ. ಗುಂದಿ, ಪ್ರೋ. ಖೈರಾನಾ, ಹಾಗೂ ವಿವಿಧ ಕ್ಲಬ್‍ಗಳಿಂದ ಆಗಮಿಸಿದ ಪಧಾದಿಕಾರಿಗಳು ಅಭಿನಂದನಾ ಪರ ಮಾತನಾಡಿದರು. ಸಭೆಯಲ್ಲಿ ಲಾ. ಗಣೇಶ ಶೆಟ್ಟಿ, ಲಾ. ಗಣಪತಿ ನಾಯಕ, ಲಾ. ಕೇಶವಾನಂದ ನಾಯಕ, ಲಾ. ರಮೇಶ ಪರಮಾರ ಅಂಕೋಲೆಯ ಪ್ರಮುಖ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.