ಕುಮಟಾ: ಇಲ್ಲಿಯ ಊರಕೇರಿ ರಾಮನಾಥ ಪ್ರೌಢಶಾಲೆಯಲ್ಲಿ ಚಿತ್ರದುರ್ಗದ ಚೆಳ್ಳೆಕೇರಿಯ ಕರ್ನಾಟಕ ಅಕಾಡೆಮಿ ಆಫ್ ಮ್ಯಾಥೆಮೆಟಿಕ್ಸ್ ನಡೆಸಿದ “ರಾಷ್ಟ್ರೀಯ ಪ್ರತಿಭಾನ್ವೇಷಣಾ 2019” ರ ಪರೀಕ್ಷೆಯಲ್ಲಿ ಸಾಧನೆ ಮೆರೆದಿದ್ದಾರೆ. ಪರೀಕ್ಷೆ ಬರೆದ 70 ವಿದ್ಯಾರ್ಥಿಗಳಲ್ಲಿ ಪ್ರೇರಣಾ ಉಮೇಶ ಪಟಗಾರ, ಮಿಥುನ್ ರಾಮಚಂದ್ರ ನಾಯ್ಕ ಹಾಗೂ ಸುದೀಪ ನಾರಾಯಣ ಭಟ್ಟ ರಾಷ್ಟ್ರ ಮಟ್ಟದಲ್ಲಿ ಶ್ರೇಯಾಂಕಿತರಾಗಿದ್ದಾರೆ. ಕುಮಾರಿ ಪ್ರಜ್ಞಾ ವಿಷ್ಣು ನಾಯ್ಕ ರಾಜ್ಯಮಟ್ಟದಲ್ಲಿ ಮೊದಲ ಶ್ರೇಯಾಂಕ ಗಳಿಸಿದ್ದು ಅವರಿಗೆ ಶಾಲೆಯ ಗಣಿತ ಸಂಘ ಏರ್ಪಡಿಸದ್ದ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅನಿಲ್ ರೊಡ್ರಿಗಸ್ ವಿದ್ಯಾರ್ಥಿಗಳಿಗೆ ಗಣಿತ ಜ್ಞಾನ ಹೆಚ್ಚಿಸಲು ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳು ಸಹಕಾರಿಯಾಗಬಲ್ಲದು ಎಂದರು. ಮುಖ್ಯಾಧ್ಯಾಪಕ ಎಸ್.ಜಿ.ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸಂಘಟಕ ಶಿಕ್ಷಕ ಆರ್.ಎಂ.ನಾಯ್ಕ ಅವರಿಗೆ ಉತ್ತಮ ಸಂಘಟಕ ಶಿಕ್ಷಕ ಎಂದು ಪ್ರಶಸ್ತಿ ಪತ್ರ, ಸ್ಮರಣಿಕೆ ನೀಡಿ ಗೌರವಿಸಲಾಯಿತು.