ಯಕ್ಷ ಋಷಿ ಹೊಸ್ತೋಟ ಮಂಜುನಾಥ ಭಾಗವತರು ಇಂದು ಮಧ್ಯಾಹ್ನ 2.45ಕ್ಕೆ ಚಿರನಿದ್ದೆಗೆ ತೆರಳಿದ್ದಾರೆ. ಅವರು, ಕಳೆದ ಒಂದು ತಿಂಗಳ ಕಾಲ, ಸೋಂದಾ- ಹಳೆಯೂರಿನಲ್ಲಿರುವ ಶ್ರೀಪಾದ ಜೋಶಿ ಬಾಡಲಕೊಪ್ಪ ಅವರ ಮನೆಯಲ್ಲಿ ಆರೈಕೆ ಪಡೆಯುತ್ತಿದ್ದರು.

RELATED ARTICLES  ಶಶಿಕಾಂತ ಕೊಳೇಕರ, ಅತುಲ್ ಕಾಮತ್ ಮತ್ತು ಕಿರಣ ನಾಯಕ್ ಕುಮಟಾ ರೋಟರಿಯ ನೂತನ ಪದಾಧಿಕಾರಿಗಳು

ಅವರ ಅಂತ್ಯಕ್ರಿಯೆಯನ್ನು ಶಿರಸಿ ನಗರದ ಹೊಟೇಲ್ ಸಾಮ್ರಾಟ್ ಎದುರುಗಡೆ ಇರುವ ಸದ್ಗತಿ – ವಿದ್ಯಾನಗರ ರುದ್ರಭೂಮಿ ಯಲ್ಲಿ ಇಂದು ರಾತ್ರಿ 9.30ಕ್ಕೆ ನೆರವೇರಿಸಲಾಗುವುದು. ಪಾರ್ಥಿವ ಶರೀರವನ್ನು ಸಂಜೆ 5.30 ಕ್ಕೆ ಸದ್ಗತಿಗೆ ತರಲಾಗುತ್ತಿದೆ. ಶಿಷ್ಯರು ಹಾಗೂ ಅಭಿಮಾನಿಗಳು ಸದ್ಗತಿಗೆ ಆಗಮಿಸಬೇಕಾಗಿ ಯಕ್ಷಶಾಲ್ಮಲಾದ ಅಧ್ಯಕ್ಷ ಆರ್.ಎಸ್.ಹೆಗಡೆ ಭೈರುಂಬೆ ಅವರು ಕೋರಿದ್ದಾರೆ.

RELATED ARTICLES  ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವು.