ಕಾರವಾರ: ನಗರದಿಂದ ಮಧ್ಯಾಹ್ನ 1.30 ಗಂಟೆ ದೇವಳಮಕ್ಕಿ ತನಕ ಪ್ರತ್ಯೇಕ ಬಸ್ಸು ಬಿಡುವಂತೆ ಇವತ್ತು ಹುಬ್ಬಳ್ಳಿಯ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಛೇರಿಯಲ್ಲಿ ಹೋಗಿ ಮಾನ್ಯ ಅಧ್ಯಕ್ಷರಾದ ಶ್ರೀ ವಿ.ಎಸ ಪಾಟೀಲಗೆ ಗ್ರಾಮಸ್ಥರ ಪರವಾಗಿ ಸ್ಥಳೀಯರಾದ ಪ್ರಜ್ವಲ್ ಬಾಬುರಾಯ ಶೇಟ ಮನವಿ ನೀಡಿದರು.


ಕಾರವಾರ ನಗರದಿಂದ ದೇವಳಮಕ್ಕಿ ಗ್ರಾಮದ ತನಕ ಮಧ್ಯಾಹ್ನ ಸಮಯದಲ್ಲಿ ಸರಿಯಾದ ವೇಳೆಗೆ ಬಸ್ಸು ಸೌಕರ್ಯ ಇಲ್ಲದರಿಂದ‌ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಕಾರ್ಮಿಕರಿಗೆ ನಗರಕ್ಕೆ ಬಂದು ತಮ್ಮ ಕೆಲಸ ಕಾರ್ಯಗಳನ್ನು ಮಾಡಿ ಪುನಹ ತಮ್ಮ ಗ್ರಾಮಕ್ಕೆ ಹೋಗಬೇಕಾದರೆ ಗ್ರಾಮಸ್ಥರಿಗೆ ತುಂಬಾ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತಮ್ಮ ತರಗತಿ ಮುಗಿಸಿ ಬಸ್ಸ ನಿಲ್ದಾಣದಲ್ಲಿ ಹೋಗಿದ್ದರಿಂದ ಬಸ್ಸು ಮಿಸ್ ಆಗುತ್ತೆ ಆಗ ಹೊಟ್ಟೆ ಹಸಿವೆಯಿಂದ ಒಂದು ತಾಸುಕ್ಕೂ ಹೆಚ್ಚು ಬೇರೆ ಬಸ್ಸು ಬರುವರಿಗೂ ಕಾಯಬೇಕಾಗುತ್ತದೆ ಸ್ಥಳೀಯ ನಿವಾಸಿ ಪ್ರಜ್ವಲ್ ಬಾಬುರಾಯ ಶೇಟ ಬಸ್ಸು ಸಮಸ್ಯೆ ಹೇಳಿ ಅತಿ ಬೇಗನೆ ಹೊಸ ಬಸ್ಸನ್ನು ಒದಗಿಸಬೇಕೆಂದು ಮನವಿ ಮಾಡಿದರು.

RELATED ARTICLES  ಉತ್ತರ ಕನ್ನಡದ ಪ್ರಮುಖ ತಾಲೂಕಿನ ಕೊರೋನಾ ವಿವರ